ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಬಳಿಕ ಸತತ ನಾಲ್ಕು ದಿನವೂ ತೈಲ ಬೆಲೆ ಏರಿಕೆಯಾಗಿದ್ದು, ಶುಕ್ರವಾರ ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ರೂ.102 ತಲುಪಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಇಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 31 ಪೈಸೆ ಹೆಚ್ಚಿಸಿದೆ.
ಇದರಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91.27 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 81.73 ರೂಪಾಯಿಗೆ ಏರಿಕೆ ಕಂಡಿದೆ.
ಸತತ ನಾಲ್ಕು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿರುವ ಪರಿಣಾಮ ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರ್‌ಗೆ 102.15 ರೂಪಾಯಿಗೆ ತಲುಪಿದೆ.
ಇದರಂತೆ ಮಧ್ಯ ಪ್ರದೇಶದ ಅನುಪ್ಪೂರಿನಲ್ಲಿ, ಪ್ರತೀ ಲೀಟರೇ ಪೆಟ್ರೋಲ್ ದರ ರೂ. 101.86 ರೂಪಾಯಿಗೆ ತಲುಪಿದೆ, ಮಹಾರಾಷ್ಟ್ರದ ಪರಭಾನಿಯಲ್ಲಿ 100ರ ಗಡಿಯಲ್ಲಿದ್ದು, ಲೀಟರ್‌ಗೆ 99.95 ರೂಪಾಯಿನಷ್ಟಿದೆ.
ಈ ವರ್ಷ ಎರಡನೇ ಬಾರಿಗೆ ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂಪಾಯಿ ಗಡಿದಾಟಿದೆ. ಆಯಾ ರಾಜ್ಯಗಳ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ರಾಜಸ್ಥಾನವು ದೇಶದಲ್ಲೇ ಅತಿ ಹೆಚ್ಚು ವ್ಯಾಟ್ ವಿಧಿಸುತ್ತದೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ.