ಕಾಸರಗೋಡು: ಕಾಸರಗೊಡು ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ್ ಆಕ್ಸಿಜನ್ ಪ್ಲಾಂಟ್ ಜಂಟಿ ಯೋಜನೆಗಾಗಿ ಗ್ರಾಮ ಪಂಚಾಯತ್ ಗಳು ತಲಾ 4 ಲಕ್ಷ ರೂ., ಬ್ಲೋಕ್ ಪಂಚಾಯತ್-ನಗರಸಭೆಗಳು ತಲಾ 5 ಲಕ್ಷ ರೂ. ನೀಡಬೇಕು ಎಂದು ಅಡ್ ಹಾಕ್ ಜಿಲ್ಲಾ ಯೋಜನೆ ಸಮಿತಿ ಸಭೆ ತೀರ್ಮಾನಿಸಿದೆ.
ಉಳಿದ ಮೊಬಲಗನ್ನು ಜಿಲ್ಲಾ ಪಂಚಾಯತ್ ಒದಗಿಸಲಿದೆ. ಜಿಲ್ಲಾ ಪಂಚಾಯತ್ ಜಾರಿಗೊಳಿಸಲು ಉದ್ದೇಶಿಸಿರುವ 7 ಕೇಂದ್ರಗಳಲ್ಲಿ ಡಯಾಲಿಸಿಸ್ ಯೋಜನೆಗೆ ಸ್ಥಳೀಯಾಡಳಿತ ಸಂಸ್ಥೇಗಳು ನಿಧಿ ಮೀಸಲಿರಿಸಬೇಕು ಎಂದು ಸಭೆ ನಿರ್ಧರಿಸಿದೆ.
ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ತಲಾ ಒಂದು ಡೋಮಿಸಲಿಯರಿ ಕೇರ್ ಸೆಂಟರ್: ಏಕಕಾಲಕ್ಕೆ 2 ಮಾಸ್ಕ್ ಧರಿಸಬೇಕು: ಕೊರೋನಾ ಕೋರ್ ಸಮಿತಿ ಸಭೆ
ಕಾಸರಗೋಡು, ಏ.30: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರಕಟಿಸಿರುವ ನಿಯಂತ್ರಣಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ತಿಳಿಸಿದೆ.
ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೇಗಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ 45 ದಿನಗಳ ಅವಧಿಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಆನ್ ಲೈನ್ ಮೂಲಕ ಈ ಸಭೆ ಜರುಗಿತು.
ಸದ್ರಿ ದಾಖಲಾತಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಅಗತ್ಯ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಉದದಿಮಿಕ ತಳಹದಿಯಲ್ಲಿ ಘಟಕ ಆರಮಭಿಸಲು ಉದ್ದೇಶಿಸಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ತಲಾ ಒಂದು ಕೋವಿಡ್ ಡೊಮಿಸಿಲಿಯರಿ ಕೇರ್ ಸೆಂಟರ್ ಸಜ್ಜುಗೊಳಿಸಲು ಕ್ರಮ ಆರಂಭಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತ್ ಗಳಲ್ಲೂ ಕೋವಿಡ್ ಕೇರ್ ಸೆಂಟರ್ 24 ತಾಸುಗಳ ಅವಧಿಯಲ್ಲಿ ಚಟುವಟಿಕೆ ಆರಂಭಿಸುವಂತೆ ಕಾರ್ಯದರ್ಶಿಗಳಿಗೆ ಕಡ್ಡಾಯ ಆದೇಶ ನೀಡಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ಟೆಸ್ಟ್ ಪಾಸಿಟಿವಿಟಿ ರಾಜ್ಯದಲ್ಲೇ ಅತ್ಯಧಿಕವಾಗಿದೆ. ಸದ್ರಿ ಹಿನ್ನೆಲೆಯಲ್ಲಿ ಎನ್.95 ಮಾಸ್ಕ್ ಯಾ 2 ಮಾಸ್ಕ್ ಗಳನ್ನು ಬಳಸುವುದು ಲೇಸು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಮೀನುಗಾರಿಕೆ ಇಲಾಕೆ ವ್ಯಾಪ್ತಿಯ ತಾಂತ್ರಿಕ ಶಾಲೆಗಯಲ್ಲಿರುವ 50 ಬೆಡ್ ಗಳನ್ನು ತ್ರಿಕರಿಪುರ ಪಾಲಿಟೆಕ್ನಿಕ್ ನ ಸಿ.ಎಫ್.ಎಲ್.ಟಿ.ಸಿ.ಗೆ ನೀಡಲಾಗುವುದು. ಕೇರಳ ಕಿರು ಉದ್ದಿಮೆ ಅಸೋಸಿಯೆಶನ್ 25 ಮಂಚಗಳನ್ನು ನೀಡುವುದಾಗಿ ತಿಳಿಸಿದೆ.
ಇತರ ರಾಜ್ಯಗಳಿಂದ ಆಗಮಿಸುವ ಮಂದಿ ಕೋವಿಡ್ ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕು. ನೆಗೆಟಿವ್ ಸರ್ಟಿಫಿಕೆಟ್ ಹೊಂದಿರುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 17 ಗಡಿ ಪಾಯಿಂಟ್ ಗಳಲ್ಲೂ ತಪಾಸಣೆ ನಡೆಸಲಾಗುವುದು. ಸದ್ರಿ ಗಡಿಗಳಲ್ಲಿ ಈಗ ಪೋಲೀಸ್ ಸಿಬ್ಬಂದಿ ಮಾತ್ರ ಇರುವ ಹಿನ್ನೆಲೆಯಲ್ಲಿ ಅಗತ್ಯದ ಸಿಬ್ಬಂದಿಯನ್ನು ನೇಮಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಇತರ ರಾಜ್ಯಗಳಿಂದ ರೈಲು ಮೂಲಕ ಆಗಮಿಸುವ ಮಂದಿಯ ತಪಾಸಣೆಗಾಗಿ ಕಾಸರಗೋಡು, ಮಂಜೇಶ್ವರ, ಕಾಞಂಗಾಡು ರೈಲು ನಿಲ್ದಾಣಗಲಲ್ಲಿ ಬ್ಲೋಕ್ ಪಂಚಾಯತ್ ಗಳ ಮುಖಾಂತರ ಅಗತ್ಯದ ಸಜ್ಜೀಕರಣ ನಡೆಸುವ ನಿಟ್ಟಿನಲ್ಲಿ ಎ.ಡಿ.ಸಿ.ಗೆ ಹೊಣೆ ನೀಡಲಾಗಿದೆ. ಪ್ರಯಾಣಿಕರ ಕೋವಿಡ್ ಜಾಗ್ರತಾ ಪೆÇೀರ್ಟಲ್ ನೋಂದಣಿ, ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಇತ್ಯಾದಿಗಳ ಪರಿಶೀಲನೆ ಅಲ್ಲದೆ ರೋಗಲಕ್ಷಣಗಳಿವೆಯೇ ಎಂಬ ತಪಾಸಣೆಯೂ ನಡೆಯಲಿದೆ.
ಜಿಲ್ಲೆಯಲ್ಲಿ ಹೆಚ್ಚುವರಿ ಕಟ್ಟುನಿಟ್ಟು ಜಾರಿಗಾಗಿ ಮಾಸ್ಟರ್ ಯೋಜನೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಒಳಗೊಳಿಸಿ ವಿಸ್ತೃತಗೊಳಿಸಲಾಗುವುದು. ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಪರಿಣಾಮಕಾರತಿಯಾಗಿ ನಡೆಸುವ ನಿಟ್ಟಿನಲ್ಲಿ ಸೆಕ್ಟರ್ ಮೆಜಿಸ್ಟ್ರೇಟ್ ಗಳ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು. ಮಾಸ್ಟರ್ ಯೋಜನೆಯ ಕರ್ತವ್ಯದಲ್ಲಿರುವ ಶಿಕ್ಷಕರಿಗೆ ಬೇರೆ ಕರ್ತವ್ಯ ನೀಡಕೂಡದು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.
ಕೃಷಿ ಬೆಳೆಗಳ ಕೊಯ್ಲಿನ ಕಾಲಾವಧಿ ಇದಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಕಟ್ಟುನಿಟ್ಟುಗಳು ಇವುಗಳಿಗೆ ಮಾರುಕಟ್ಟೆ ಲಭ್ಯತೆಗೆ ಸಮಸ್ಯೆಯಾಗುವ ಭೀತಿಯಿದೆ. ಇದರ ಪರಿಹಾರಕ್ಕೆ ನ್ಯಾಯಬೆಲೆಗೆ ಈ ಬೆಳೆಗಳ ಮಾರಾಟಕ್ಕಾಗಿ ವ್ಯವಸ್ಥೆ ಏರ್ಪಡಿಸುವಂತೆ ಪ್ರಧಾನ ಕೃಷಿ ಅಧಿಕಾರಿಗೆ ಆದೇಶ ನೀಡಲಾಗಿದೆ. ಏಪ್ರಿಲ್ ತಿಂಗಳ ಆಹಾರ ಧಾನ್ಯಗಳ ಕಿಟ್ ವಿತರನೆ ಮೇ 5ರ ಮುಂಚಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಸಪ್ಲೈ ಅಧಿಕಾರಿಗೆ ಆದೇಶಿಸಲಾಗಿದೆ.
ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯಲ್ಲಿ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಹೆಚ್ಚುವರಿ ಸ್ವಯಂಸೇವಕರನ್ನೂ ಈ ನಿಟ್ಟಿನಲ್ಲಿ ನೇಮಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿದರು.
ಹೆಚ್ಚುವರಿ ದಂಡನಧಿಕಾರಿ ಅತುಲ್ ಸ್ವಾಮಿನಾಥ್, ಕೊರೋನಾ ಕೋರ್ ಸಮಿತಿ ಸದಸ್ಯರು ಮೊದಲಾದವರು ಭಾಗವಹಿಸಿದರು.