ತಿರುವನಂತಪುರ: ಪೋಲೀಸ್ ಪ್ರಯಾಣ ಪಾಸ್ ಗೆ ದೊಡ್ಡ ಜನದಟ್ಟಣೆ ಎಲ್ಲೆಡೆ ಇದೆ.ಪಾಸ್ ವ್ಯವಸ್ಥೆ ಜಾರಿಗೆ ಬಂದ ಮೊದಲ ದಿನವಾದ ಶನಿವಾರ ಸಂಜೆ ರಾತ್ರೋರಾತ್ರಿ 40,000 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದರು. ಅರ್ಜಿದಾರರಲ್ಲಿ ಹೆಚ್ಚಿನವರು ಅನಗತ್ಯ ಪ್ರಯಾಣಿಕರಾಗಿದ್ದು, ಅನಿವಾರ್ಯ ಪ್ರಯಾಣಕ್ಕಾಗಿ ಮಾತ್ರ ಪಾಸ್ ನೀಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ಪಾಸ್ ಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಶನಿವಾರ ಸಂಜೆ ಸಂಪೂರ್ಣವಾಗಿ ಆರಂಭಿಸಲಾಗಿದೆ. ಸುಮಾರು 40,000 ಜನರು ಬೆಳಿಗ್ಗೆ ತನಕ ಅರ್ಜಿ ಸಲ್ಲಿಸಿದರು. ಮತ್ತು ಪಾಸ್ಗಾಗೆ ಪೊ
ನಿರ್ವಾಹವಿಲದೆ ಪ್ರಯಾಣ ºಮಾಡಬೇಕಾದರೆ ಮಾತ್ರ ಅನುಮತಿಸಲಾಗುವುದು. ಜನರನ್ನು ನಿರ್ಮಾಣ ಸ್ಥಳಕ್ಕೆ ಕೆಲಸಕ್ಕೆ ಕರೆತರುವುದು ಮತ್ತು ವಿಶೇಷ ವಾಹನದಲ್ಲಿ ಕೆಲಸ ಮಾಡಲು ಕಾರ್ಮಿಕರನ್ನು ಸಾಗಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಆದರೆ, ಎಲ್ಲಾ ಅರ್ಜಿದಾರರಿಗೆ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಡಿಜಿಪಿ ಲೋಕನಾಥ್ ಬೆಹ್ರಾ ತಿಳಿಸಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಗುವುದು ಎಂದರು.