ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಅನಿವಾರ್ಯ ಹಂತಗಳಲ್ಲಿ ಪ್ರಯಾಣ ಮಾಡಬೇಕಾದ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 4014 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಈ ನಿಟ್ಟಿನಲ್ಲಿ ಈ ವರೆಗೆ ಒಟ್ಟು 15948 ಮಂದಿ ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದರು.
ಅನಿವಾರ್ಯ ಸೇವೆ ವಿಭಾಗಕ್ಕೆ ಸೇರಿರುವ ಮಂದಿಯಾದರೂ, ಕಚೇರಿಯ ಗುರುತುಚೀಟಿ ಇಲ್ಲದವರು, ಮನೆಗೆಲಸ, ಕಾರ್ಮಿಕರು, ಕೂಲಿ ಕಾರ್ಮಿಕರು, ಹೋಂ ನರ್ಸ್ ಮೊದಲಾದವರಲ್ಲಿ ಗುರುತುಚೀಟಿ ಇಲ್ಲದವರು ಪಾಸ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅತಿ ಅನಿವಾರ್ಯ ಸಂದರ್ಭಗಳಲ್ಲಿ ಜಿಲ್ಲೆ ಬಿಟ್ಟು ಹೊರತೆರಳಬೇಕಾದವರಿಗೆ ಇ-ಪಾಸ್ ಅಗತ್ಯವಾಗಿದೆ. ಅತಿ ನಿಕಟ ಸಂಬಂಧಿಕರ ನಿಧನ, ವಿವಾಹ, ನಿಕಟ ಸಂಬಂಧಿಕರಾಗಿರುವ ರೋಗಿಯ ಸಂದರ್ಶನ , ರೋಗಿಯ ಚಿಕಿತ್ಸೆ ಅಗತ್ಯಕ್ಕಾಗಿ ಇನ್ನೊಂದೆಡೆ ಕರೆದೊಯ್ಯುವಿಕೆ ಇತ್ಯಾದಿ ವಿಚಾರಗಳಿಗೆ ಮಾತ್ರ ಜಿಲ್ಲೆ ಬಿಟ್ಟು ಹೊರ ತೆರಳಬಹುದಾಗಿದೆ.