HEALTH TIPS

ಕಾಸರಗೋಡು ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಡೊಮಿಸಲರಿ ಕೇರ್ ಸೆಂಟರ್ ತುರ್ತಾಗಿ ಆರಂಭ

                             

           ಕಾಸರಗೋಡು: ಮನೆಗಳಲ್ಲಿ ಕೋವಿಡ್ ಬಾಧಿತರಾಗಿ ವಾಸಿಸುತ್ತಿರುವ ಒಬ್ಬರಿಂದ ಮನೆಯ ಉಳಿದ ಸದಸ್ಯರಿಗೆ ರೋಗ ಹರಡುವುದು, ವಯೋವೃದ್ಧರು, ಮಕ್ಕಳು ಸಹಿತ ಮಂದಿ ರೋಗ ಪೀಡಿತರಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಡೊಮಿಸಲರಿ ಕೇರ್ ಸೆಂಟರ್ ತುರ್ತಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. 

                  ಆನ್ ಲೈನ್ ಮೂಲಕ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. 

            ಮನೆಗಳಲ್ಲಿ ಅಗತ್ಯದ ಸೌಲಭ್ಯಗಳಿರದೇ ಇರುವ ಕೋವಿಡ್ ಬಾಧಿತರಿಗೆ ಡೊಮಿಸಲರಿ ಕೇರ್ ಸೆಂಟರ್ ನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಸೌಲಭ್ಯ ಸಿದ್ಧಪಡಿಸಬೇಕು. 

            ಜಾಸರಗೋಡು ಜಿಲ್ಲೆಯ ಕೋವಿಡ್ ಟೆಸ್ಟ್ ಪಾಸಿಟಿವಿಟಿ ಗಣನೆ ಕುಂಠಿತಗೊಳಿಸಲು ಸ್ಥಳೀಯ ಮಟ್ಟದಲ್ಲಿ ಜನಜಾಗೃತಿ ಪ್ರಬಲಗೊಳಿಸಲಾಗಿದೆ. 777 ವಾರ್ಡ್ ಗಳಲ್ಲಿ 1800 ಶಿಕ್ಷಕರು ಜನಜಾಗೃತಿಗೆ ನೇತೃತ್ವ ನೀಡುತ್ತಿದ್ದಾರೆ. ವಾರ್ಡ್ ಮಟ್ಟದಲ್ಲಿ ಜಾಗ್ರತಾ ಸಮಿತಿಗಳು, ರಾಪಿಡ್ ಆಕ್ಷನ್ ಫೆÇೀರ್ಸ್ ತಂಡ ಇತ್ಯಾದಿಗಳೊಮದಿಗೆ ಹೆಗಲು ನೀಡಿ ಶಿಕ್ಷಕರು ಚಟುವಟಿಕೆ ನಡೆಸುತ್ತಿದ್ದಾರೆ. ಕೋವಿಡ್ ಒಂದನೇ ಹಂತದಲ್ಲಿ ಜಿಲ್ಲೆಯಲ್ಲಿ ಅತ್ಯಂತ ಯಶಸದ್ವಿಯಾಗಿ ಚಟುವಟಿಕೆ ನಡೆಸಿದ್ದ ಮಾಸ್ಟರ್ ಯೋಜನೆ ಕೋವಿಡ್ ಎರಡನೇ ಹಂತದಲ್ಲೂ ಸ್ಥಳೀಯ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಸಭೆ ತಿಳಿಸಿದೆ.

               ಮಾಸ್ಟರ್ ಯೋಜನೆಯನ್ನು ಯಶಸ್ವಿಗೊಳಿಸಿದ ಶಿಕ್ಷಕರನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು. ಹೆಚ್ಚುವರಿ ಶಿಕ್ಷಕರನ್ನು ಸ್ವಯಂ ಪ್ರೇರಿತರಾಗಿ ಈ ಯೋಜನೆಯಲ್ಲಿ ಭಾಗವಹಿಸಿ ಕೋವಿಡ್ ನಿಯಂತ್ರಣಕ್ಕೆ ತೊಡಗಿದರೆ ಪರಿಣಾಮಕಾರಿಯಾದೀತು ಎಂದವರು ಆಗ್ರಹಿಸಿದರು. 

              ಇತರ ತೀರ್ಮಾನಗಳು: 

        ಕೋವಿಡ್ ಆರ್.ಟಿ.ಪಿ.ಸಿ.ಆರ್/ ಆಂಟಿಜೆನ್ ತಪಾಸಣೆ ನಡೆಸಿದವರು ತಪಾಸಣೆಯ ಫಲಿತಾಂಶ ಲಭಿಸುವವರೆಗೆ ಮನೆಗಳಲ್ಲಿ ರೂಂ ಕ್ವಾರೆಂಟೈನ್ ಪ್ರವೇಶಿಸಬೇಕು. ಇತರರೊಂದಿಗೆ ಅವರು ಬೆರೆಯಕೂಡದು.                             ವಯೋವೃದ್ಧರ ಸಮಸ್ಯೆಗಳನ್ನು ಪ್ರತ್ಯೇಕ ಪರಿಶೀಲನೆಗಳೊಂದಿಗೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಲ್ ಸೆಂಟರ್ ಆರಂಭಿಸಲಾಗುವುದು.    ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಮನೆಗಳಲ್ಲಿ ಏಕಾಂತ ಅನುಭವಿಸುತ್ತಿರುವ ವಯೋವೃದ್ಧರೊಂದಿಗೆ ನೇರವಾಗಿ ಸಂವಾದ ನಡೆಸುವರು.  ಜಿಲ್ಲೆಯ ಡ್ರೈವಿಂಗ್ ಶಾಲೆಗಳ ತರಬೇತಿ ಇನ್ನೂ ಎರಡು ವಾರಗಳ ಅವಧಿಗೆ ಮುಂದೂಡಲಾಗಿದೆ. 

            ಅಂಗಡಿಗಳಲ್ಲಿ , ರೆಸ್ಟಾರೆಂಟ್ ಗಳ ಚಟುವಟಿಕೆಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮಾತ್ರ ಇರಬೇಕು. ಹೋಟೆಲ್ ಗಳಲ್ಲಿ ರಾತ್ರಿ 9 ಗಂಟೆ ವರೆಗೆ ಪಾರ್ಸೆಲ್ ವಿತರಣೆ ಮಾತ್ರ ಇರುವುದು.                                 ಇತರ ರಾಜ್ಯಗಳ ಸಹಿತ ನಿರ್ಮಾಣ ವಲಯಗಳ ಕಾರ್ಮಿಕರ ದೈನಂದಿನ ಬದುಕಿನ ಚಟುವಟಿಕೆಗಳನ್ನು ಖಚಿತಪಡಿಸಬೇಕು. ದುಡಿಮೆ ನಡೆಸುವ ಸೈಟ್ ಗಳಲ್ಲಿ ಕರಾರುದಾತರು ಅವರಿಗೆ ಆಹಾರ, ವಸತಿ ಒದಗಿಸಬೇಕು. ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಕಾರ್ಮಿಕರು ತಮ್ಮ ಚಟುವಟಿಕೆ ನಡೆಸಬೇಕು. 

             ರಾಷ್ಟ್ರೀಯ ನೌಕರಿ ಖಾತರಿ ಯೋಜನೆಯಕಾರ್ಮಿಕರಲ್ಲಿ 5 ಮಂದಿಗಿಂತ ಕಡಿಮೆಯಿರುವ ಗುಂಪುಗಳನ್ನು ರಚಿಸಿ ಚಟುವಟಿಕೆ ನಡೆಸಬೇಕು. ಕಾಯಕ ತಡೆಯಿಲ್ಲದೆ ಕೋವಿಡ್ ಸಂಹಿತೆಗಳನ್ನು ಪಾಲಿಸಿ ನಡೆಸಬೇಕು. 

        ಕೃಷಿಕರು ಉತ್ಪಾದಿಸುವ ಬೆಳೆಗಳನ್ನು ಸೂಕ್ತವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕೃಷಿಭವನಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುವುದು.   ಸರಕಾರಿ ಸೇವೆಗಳಿಗಾಗಿ ಸಾರ್ವಜನಿಕರು ಆನ್ ಲೈನ್ ಸೌಲಭ್ಯ ಬಳಸುವ ನಿಟ್ಟಿನಲ್ಲಿ ಅಕ್ಷಯ ಕೇಂದ್ರಗಳು ಕೋವಿಡ್ ಕಟ್ಟುನಿಟ್ಟುಗಳೊಂದಿಗೆ ತೆರೆದು ಕಾರ್ಯಾಚರಿಸಬೇಕು.      ಸಾರ್ವಜನಿಕ ಪ್ರದೇಶಗಳಲ್ಲಿ ಅನಗತ್ಯವಾಗಿ ಜನ ಸೇರುವುದನ್ನು ಪೂರ್ಣರೂಪದಲ್ಲಿ ಕೈಬಿಡಬೇಕು. ಎಲ್ಲ ಅಂಗಡಿಗಳ, ಸಂಸ್ಥೆಗಳ ಮಾಲೀಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.   ಅಧಿಕೃತ ಅಗತ್ಯಗಳಿಗಲ್ಲದೆ ವಾಹನಗಳಲ್ಲಿ ಸಾಮೂಹಿಕವಾಗಿ ಪ್ರಯಾಣ ನಡೆಸಕೂಡದು.   ಮೊಬೈಲ್ ಪೋನ್ ದುರಸ್ತಿ ಅಂಗಡಿಗಳು ದಿನ ಬಿಟ್ಟು ದಿನ ತೆರೆದು ಕಾರ್ಯಾಚರಿಸಬೇಕು. ಅಗತ್ಯದ ಸಾಮಾಗ್ರಿಗಳೊಂದಿಗೆ ಮಹಾರಾಷ್ಟ್ರ, ಕರ್ನಾಟಕ ಸಹಿತ ರಾಜ್ಯಗಳಿಂದ ಬರುವ ಕಿರು ವಾಹನಗಳ ಸಿಬ್ಬಂದಿ ಡಬ್ಬಲ್ ಮಾಸ್ಕ್ , ಗ್ಲೌಸ್ ಧರಿಸಬೇಕು. 

         ಆರಾಧನಾಲಯಗಳಲ್ಲಿ 43 ಚದರ ಅಡಿ ವಿಸ್ತೀರ್ಣದಲ್ಲಿ ತಲಾ ಒಬ್ಬ ಎಂಬ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಂಡು ಗರಿಷ್ಠ 50 ಮಂದಿ ಮಾತ್ರ ಭಾಗವಹಿಸಬೇಕು. ಅಂಗಡಿಗಳಲ್ಲಿ, ಬ್ಯಾಂಕ್ ಗಳಲ್ಲಿ, ಎ.ಟಿ.ಎಂ.ಗಳಲ್ಲಿ ಇತ್ಯಾದಿ ಕಡೆ ಎ.ಸಿ. ಬಳಸಕೂಡದು.  ಜಿಂನೇಷ್ಯಂ, ಸಭಾಂಗಣ, ಆಟದ ಮೈದಾನ, ಟರ್ಫ್ ಇತ್ಯಾದಿಗಳ ಚಟುವಟಿಕೆಗೆ ಅನುಮತಿಯಿಲ್ಲ. 

             ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶರೀ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries