ತಿರುವನಂತಪುರ: ಕೇರಳದಲ್ಲಿ ಇಂದು 41,953 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 6558, ಕೋಝಿಕೋಡ್ 5180, ಮಲಪ್ಪುರಂ 4166, ತ್ರಿಶೂರ್ 3731, ತಿರುವನಂತಪುರ 3727, ಕೊಟ್ಟಾಯಂ 3432, ಆಲಪ್ಪುಳ 2951, ಕೊಲ್ಲಂ 2946, ಪಾಲಕ್ಕಾಡ್ 2551, ಕಣ್ಣೂರು 2087, ಇಡುಕ್ಕಿ 1396, ಪತ್ತನಂತಿಟ್ಟು 1282, ಕಾಸರಗೋಡು 1056, ವಯನಾಡ್ 890 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,63,321 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.25.69 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,64,60,838 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (114), ದಕ್ಷಿಣ ಆಫ್ರಿಕಾ (8) ಮತ್ತು ಬ್ರೆಜಿಲ್ (1) ಎಂಣಬಂತೆ ಒಟ್ಟು 123 ಮಂದಿ ಜನರಿಗೆ ಈವರೆಗೆ ಸೋಂಕು ಖಚಿತಪಡಿಸಲಾಗಿದೆ. ಈ ಪೈಕಿ 114 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 58 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5565 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 283 ಮಂದಿ ಜನರು ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 38,896 ಮಂದಿ ಜನರಿಗೆ ಸೋಂಕು ತಗುಲಿತು. 2657 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 6466, ಕೋಝಿಕೋಡ್ 5078, ಮಲಪ್ಪುರಂ 3932, ತ್ರಿಶೂರ್ 3705, ತಿರುವನಂತಪುರ 3267, ಕೊಟ್ಟಾಯಂ 3174, ಆಲಪ್ಪುಳ 2947, ಕೊಲ್ಲಂ 2936, ಪಾಲಕ್ಕಾಡ್ 1048, ಕಣ್ಣೂರು 1906, ಇಡುಕ್ಕಿ 1326, ಪತ್ತನಂತಿಟ್ಟು 1236, ಕಾಸರಗೋಡು 1007, ವಯನಾಡ್ 868 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 117 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಲ್ಪಟ್ಟಿದೆ. ಕಣ್ಣೂರು 38, ಕಾಸರಗೋಡು 16, ಎರ್ನಾಕುಳಂ 14, ಪತ್ತನಂತಿಟ್ಟು 11, ಪಾಲಕ್ಕಾಡ್ 10, ತ್ರಿಶೂರ್ 9, ವಯನಾಡ್ 8, ಕೊಲ್ಲಂ, ಇಡಕ್ಕಿ ತಲಾ 3, ತಿರುವನಂತಪುರ, ಕೊಟ್ಟಾಯಂ 2 ಮತ್ತು ಮಲಪ್ಪುರಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ಸೋಂಕು ಪತ್ತೆಯಾದ 23,106 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 2221, ಕೊಲ್ಲಂ 2745, ಪತ್ತನಂತಿಟ್ಟು 565, ಆಲಪ್ಪುಳ 1456, ಕೊಟ್ಟಾಯಂ 2053, ಇಡುಕಿ 326, ಎರ್ನಾಕುಳಂ 2732, ತ್ರಿಶೂರ್ 1532, ಪಾಲಕ್ಕಾಡ್ 998, ಮಲಪ್ಪುರಂ 2711, ಕೊಝಿಕೋಡ್ 3762, ವಯನಾಡ್ 300, ಕಣ್ಣೂರು 1590, ಕಾಸರಗೋಡು 115 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 3,75,658 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 13,62,363 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 7,84,193 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,55,453 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 28,740 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3868 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.