ತಿರುವನಂತಪುರ: ರಾಜ್ಯದಲ್ಲಿ ಇಂದು ತೀವ್ರ ಕಳವಳಕಾರಿಯಾಗಿ ಕೋವಿಡ್ ಸೋಂಕು ಕಂಡುಬಂದಿದ್ದು, 42,464 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಇಂದು ಎರ್ನಾಕುಳಂ 6506, ಕೋಝಿಕ್ಕೋಡ್ 5700, ಮಲಪ್ಪುರಂ 4405, ತಿರುವನಂತಪುರ 3969, ತ್ರಿಶೂರ್ 3587, ಆಲಪ್ಪುಳ 3040, ಪಾಲಕ್ಕಾಡ್ 2950, ಕೊಟ್ಟಾಯಂ 2865, ಕೊಲ್ಲಂ 2513, ಕಣ್ಣೂರು 2418, ಪತ್ತನಂತಿಟ್ಟು 1341, ಕಾಸರಗೋಡು 1158, ವಯನಾಡ್ 1056, ಇಡುಕ್ಕಿ 956 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,55,632 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ. 27.28 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ, ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,66,16,470 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಯುಕೆ ಯಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಕಳೆದ 24 ಗಂಟೆಗಳಲ್ಲಿ ಕೋವಿಡ್ ದೃಢಪಟ್ಟಿದೆ. ಯುಕೆ (115), ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 124 ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 114 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 63 ಮಂದಿ ಸೋಂಕು ಬಾಧಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಲಾಗಿದೆ. ಈ ಮೂಲಕ ಕೋವಿಡ್ ಬಾಧಿಸಿ ಈವರೆಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 5628 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 265 ಮಂದಿ ಜನರು ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 39,496 ಮಂದಿ ಜನರಿಗೆ ಸೋಂಕು ತಗುಲಿತು. 2579 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 6411, ಕೋಝಿಕೋಡ್ 5578, ಮಲಪ್ಪುರಂ 4181, ತಿರುವನಂತಪುರ 3655, ತ್ರಿಶೂರ್ 3556, ಆಲಪ್ಪುಳ 3029, ಪಾಲಕ್ಕಾಡ್ 1263, ಕೊಟ್ಟಾಯಂ 2638, ಕೊಲ್ಲಂ 2503, ಕಣ್ಣೂರು 2199, ಪತ್ತನಂತಿಟ್ಟು 1307, ಕಾಸರಗೋಡು 1106, ವಯನಾಡ್ 1025, ಇಡುಕ್ಕಿ 945 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 124 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ಕಳವಳಕಾರಿಯಾಗಿ ದಾಖಲಾಗಿದೆ. ಕಣ್ಣೂರು 39, ಕಾಸರಗೋಡು 20, ತ್ರಿಶೂರ್ 15, ಪಾಲಕ್ಕಾಡ್ 13, ವಯನಾಡ್ 11, ಪತ್ತನಂತಿಟ್ಟು, ಎರ್ನಾಕುಳಂ ತಲಾ 6, ತಿರುವನಂತಪುರ 5, ಕೊಲ್ಲಂ, ಕೋಝಿಕೋಡ್ ತಲಾ 3, ಕೊಟ್ಟಾಯಂ, ಇಡುಕ್ಕಿ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 27,152 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 2389, ಕೊಲ್ಲಂ 2035, ಪತ್ತನಂತಿಟ್ಟು 903, ಆಲಪ್ಪುಳ 1923, ಕೊಟ್ಟಾಯಂ 3013, ಇಡುಕ್ಕಿ 228, ಎರ್ನಾಕುಳಂ 2999, ತ್ರಿಶೂರ್ 1519, ಪಾಲಕ್ಕಾಡ್ 2488, ಮಲಪ್ಪುರಂ 3205, ಕೊಝಿಕ್ಕೋಡ್ 3996, ವಯನಾಡ್ 182, ಕಣ್ಣೂರು 2083, ಕಾಸರಗೋಡು 189 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 3,90,906 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 13,89,515 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 8,18,411 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,88,529 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 29,882 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3633 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 8 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 723 ಹಾಟ್‍ಸ್ಪಾಟ್‍ಗಳಿವೆ.