HEALTH TIPS

ಕೇರಳದ ಮೂಲಕ ಹಾದುಹೋಗುವ ಇನ್ನೂ 44 ರೈಲು ಸೇವೆಗಳು ರದ್ದು

                                                 

                 ಕೊಚ್ಚಿ: ಕೇರಳದಲ್ಲಿ ದೂರದ ಪ್ರಯಾಣದ ಸೇವೆಗಳು ಸೇರಿದಂತೆ ಇನ್ನೂ 44 ರೈಲುಗಳನ್ನು ರದ್ದುಪಡಿಸಲಾಗಿದೆ. ಇದರೊಂದಿಗೆ ಎರಡು ವಾರಗಳಲ್ಲಿ 62 ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ. ರದ್ದತಿ ಈ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಪ್ರಸ್ತುತ ಪರಶುರಾಮ್, ಮಲಬಾರ್ ಎಕ್ಸ್‍ಪ್ರೆಸ್, ಮಾವೇಲಿ ಮತ್ತು ಅಮೃತದಂತಹ ದೈನಂದಿನ ರೈಲುಗಳು ಮಾತ್ರ ಸೇವೆಯಲ್ಲಿವೆ.


                 ತಿರುವನಂತಪುರಂನಿಂದ ಚೆನ್ನೈ, ಮಂಗಳೂರು-ಚೆನ್ನೈ, ಎರ್ನಾಕುಳಂ-ಲೋಕಮಾನ್ಯ ತಿಲಕ್, ಕೊಚುವೇಲಿ-ಪೋರ್ಬಂದರ್, ಕೊಚುವೇಲಿ-ಇಂದೋರ್, ವಂಚಿನಾಡ್-ಎಕ್ಸ್‍ಪ್ರೆಸ್, ಎರ್ನಾಕುಳಂ-ಶೋರ್ನೂರ್, ಎರ್ನಾಕುಳಂ-ಅಲಪ್ಪುಳ, ಅಲಪ್ಪುಳ-ಕೊಲ್ಲಂ, ಕಣ್ಣೂರು-ಶೋರ್ನೂರ್ ಸಹಿತ ಮೆಮು ಸೇವೆಗಳನ್ನು ರದ್ದುಪಡಿಸಲಾಗಿದೆ.

                   ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೂ ಲಾಕ್‍ಡೌನ್ ಗೂ ಯಾವುದೇ ಸಂಬಂಧವಿಲ್ಲ. ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ಹಿಂದೆ ರೈಲ್ವೆ ಹೇಳಿದೆ. ಇದಕ್ಕೂ ಮೊದಲು ಕಣ್ಣೂರು-ಜನಶತಾÀಬ್ಡಿ, ವಂಚಿನಾಡ್ ಎಕ್ಸ್‍ಪ್ರೆಸ್, ಪಾಲರುವಿ ಎಕ್ಸ್‍ಪ್ರೆಸ್, ಅಂತ್ಯೋದಯ ಎಕ್ಸ್‍ಪ್ರೆಸ್, ಏರ್ನಾಡು, ಬೆಂಗಳೂರು ಇಂಟರ್ಸಿಟಿ, ಬಾಣಸವಾಡಿ-ಎರ್ನಾಕುಳಂ, ಮಂಗಳೂರು-ತಿರುವನಂತಪುರ ಮತ್ತು ನಿಜಾಮುದ್ದೀನ್-ತಿರುವನಂತಪುರ ವಾರದ ರೈಸೇವೆಗಳನ್ನೂ ರದ್ದುಗೊಳಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries