HEALTH TIPS

ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ; 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ

              ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಬೃಹತ್ ಮಟ್ಟದಲ್ಲಿ ಸೈಬರ್ ದಾಳಿ ನಡೆದಿದ್ದು, ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

        ಫೆಬ್ರವರಿಯಲ್ಲಿ ತನ್ನ ಡೇಟಾ ಪ್ರಾಸೆಸರ್ ಮೇಲೆ ಭಾರೀ ಸೈಬರ್ ದಾಳಿ ನಡೆದಿದ್ದು, ಸುಮಾರು ಹತ್ತು ವರ್ಷಗಳ ಅವಧಿಯ ಏರ್ ಇಂಡಿಯಾ ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್‌ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.

       ಈ ಸಂಗತಿ ವಿಶ್ವಾದ್ಯಂತ 4,500,000 ದತ್ತಾಂಶದ ಮೇಲೆ ಪರಿಣಾಮ ಬೀರಿದೆ ಮತ್ತು ಆಗಸ್ಟ್ 26, 2011 ಹಾಗೂ ಫೆಬ್ರವರಿ 3, 2021ರ ನಡುವೆ ನೋಂದಣಿಯಾದವರ ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

        ಪ್ರಯಾಣಿಕರ ಸೇವಾ ವ್ಯವಸ್ಥೆ ಡೇಟಾ ಪ್ರಾಸೆಸರ್ ಮೇಲೆ ಸಿಟಾ ಪಿಎಸ್‌ಎಸ್‌ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದಾರೆ. ಇದು ಕೆಲವು ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಗೆ ಕಾರಣವಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್, ಟಿಕೆಟ್, ಕ್ರೆಡಿಟ್ ಕಾರ್ಡ್, ಸ್ಟಾರ್ ಅಲಯನ್ಸ್‌ ಹಾಗೂ ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ (ಪಾಸ್ವರ್ಡ್ ಹೊರತುಪಡಿಸಿ) ಮಾಹಿತಿಗಳನ್ನು ಇದು ಒಳಗೊಂಡಿರುತ್ತದೆ.

        ನಮ್ಮ ಡೇಟಾ ಪ್ರಾಸೆಸರ್ ಪರಿಹಾರ ಕ್ರಮಗಳನ್ನು ಮುಂದುವರೆಸುತ್ತೇವೆ. ಪ್ರಯಾಣಿಕರು ತಮ್ಮ ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿ ಸಾಧ್ಯವಾದಾಗಲೆಲ್ಲಾ ಪಾಸ್‌ವರ್ಡ್‌ ಬದಲಾಯಿಸುವಂತೆ ತಿಳಿಸುತ್ತಿರುತ್ತೇವೆ ಎಂದು ಸಂಸ್ಥೆ ಹೇಳಿದೆ.

      ಕ್ರೆಡಿಟ್ ಕಾರ್ಡ್ ಹೊಂದಿರುವ ಸಿವಿವಿ/ಸಿವಿಸಿ ಡೇಟಾ ಸಂಗ್ರಹಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ದಾಳಿಗೆ ಒಳಗಾದ ಪ್ರಯಾಣಿಕರಿಗೆ ಸಹಾಯ ಮಾಡಲು ಸಂಸ್ಥೆ ಕಾಲ್ ಸೆಂಟರ್ ಸ್ಥಾಪಿಸಿದೆ. ಈ ಕುರಿತು ತನಿಖೆಗೆ ಮುಂದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries