HEALTH TIPS

ಮಂಜೇಶ್ವರದಲ್ಲಿ ಮನಿಚೈನ್ ಶೈಲಿಯ ಹೂಡಿಕೆ ವಂಚನೆ; 47.22 ಕೋಟಿ ರೂ.ಗಳ ವಂಚನೆ ನಡೆದಿರುವುದಾಗಿ ಶಂಕೆ

   

            ಮಂಜೇಶ್ವರ: ಹಣ ಸರಪಳಿಯ ಮಾದರಿಯಲ್ಲಿ ಹೂಡಿಕೆ ವಂಚನೆ ನಡೆದಿರುವುದು ಮಂಜೇಶ್ವರದಲ್ಲಿ ಕಂಡುಬಂದಿದೆ. ಈ ಬಗ್ಗೆ ನಡೆಸಿದ  ಪ್ರಾಥಮಿಕ ತನಿಖೆಯಿಂದ 47.22 ಕೋಟಿ ರೂ.ಹಗರಣ ನಡೆದಿರುವುದು ವೇದ್ಯವಾಗಿದೆ. 

           ಹಗರಣವನ್ನು ಮಲೇಷಿಯಾದ ಕಂಪನಿ ಯೋಜನೆಯ ಹೆಸರಿನಲ್ಲಿ ನಡೆಸಲಾಯಿತು. ವಂಚನೆಗೆ ಹೂಡಿಕೆಯ ಮೇಲೆ ಭಾರಿ ಆದಾಯದ ಭರವಸೆ ನೀಡಲಾಯಿತು. ಒಂದು ಲಕ್ಷ ರೂ.ಗೆ ದಿನಕ್ಕೆ 450 ರೂ.ನೀಡುವುದಾಗಿ ತಿಳಿಸಲಾಗಿತ್ತು. ಮೊದಲ ಠೇವಣಿದಾರರು ಈ ಮೊತ್ತವನ್ನು ಪಡೆದರು. ಆ ಬಳಿಕ ಹೂಡಿಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಆದರೆ ಆ ಬಳಿಕ ಯಾರಿಗೂ ಹಣ ಪಾವತಿಯಾಗದಿರುವುದು ಬಹಿರಂಗಗೊಳ್ಳಲು ಕಾರಣವಾಯಿತು.  ಯುವಕನನ್ನು ಅಪಹರಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ವ್ಯಕ್ತಿಯಿಂದ ಹಗರಣದ ಬಗ್ಗೆ ಪೋಲೀಸರಿಗೆ ಮೊದಲು ಮಾಹಿತಿ ಲಭ್ಯವಾಯಿತು. 

                ಇದಲ್ಲದೆ, ಹೊಸಂಗಡಿ ಮೂಲದ ಶೆಫೀಕ್ ಅವರಿಂದ ದೂರು ದಾಖಲಾಗಿದೆ. ಇದರೊಂದಿಗೆ ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪೋಲೀಸರ ಪ್ರಕಾರ, ಹಲವಾರು ಜನರು ಹಗರಣಕ್ಕೆ ಬಲಿಯಾಗಿದ್ದಾರೆ. ತನಿಖೆಯ ಉಸ್ತುವಾರಿಯನ್ನು ಕಾಸರಗೋಡು  ಡಿವೈಎಸ್ಪಿ ಸದಾನಂದನ್  ವಹಿಸಿಕೊಂಡಿದ್ದಾರೆ.  ಶೇಕಡಾ 10 ರಷ್ಟು ಹಣವನ್ನು ತಕ್ಷಣವೇ ಠೇವಣಿದಾರರಿಗೆ ಮರಳಿಸಿರುವುದು ಠೇವಣಿ ನೀಡಲು ಜನರು ಮುಗಿಬೀಳಲು ಕಾರಣವಾಯಿತೆಂದು ಪೋಲೀಸರು ತಿಳಿಸಿರುವರು. 

         ವಂಚನೆಗಳ ಜಾಲ:

    ಕಾಸರಗೋಡು ಸಹಿತ ರಾಜ್ಯಾದ್ಯಂತ ಕಳೆದ ಅನೇಕ ವರ್ಷಗಳದ ಹಲವು ಮನಿಚೈನ್ ಸಹಿತ ಹಲವು ಆರ್ಥಿಕ ವಂಚನೆ ಪ್ರಕರಣಗಳು ಕೇಳಿಬರುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಿಂದ ಆವರಿಸಿರುವ ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಕಾಸರಗೋಡಿನಾದ್ಯಂತ ವಿವಿಧ ವಂಚನಾ ಪ್ರಕರಣಗಳು ವ್ಯಾಪಕಗೊಂಡಿದೆ. ಚೈನ್ ಮಾರ್ಕೆಟಿಂಗ್ ಹೆಸರಲ್ಲಿ ಗ್ರಾಮೀಣ ಪ್ರದೇಶಗಳಿಗೂ ವಕ್ಕರಿಸಿರುವ ಹಲವು ತಂಡಗಳು ಜನರನ್ನು ಸುಲಭವಾಗಿ ಬಸ್ತುಬೀಳಿಸಿ ಮನೆಯಿಂದಲೇ ಆದಾಯ ಗಳಿಸಬಹುದೆಂಬ ಸೋಗಿನಲ್ಲಿ ಲಕ್ಷಾಂತರ ರೂ. ಈಗಾಗಲೇ ವಂಚಿಸಿವೆ. ಹಲವಾರು ಜನರಲ್ಲಿ ಬೇನಾಮಿ ಹಣದ ಹರಿವು ಇರುವುದರಿಂದ ಅಂತಹ ವಂಚನೆಗೊಳಗಾದವರಾರೂ ಪೋಲೀಸರಿಗೆ ದೂರು ನೀಡಲು ಮುಂದಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಂತಹ ವ್ಯವಹಾರಗಳು ಆನ್ ಲೈನ್ ಮೂಲಕ ನಡೆಯುತ್ತಿರುವುದರಿಂದ ಯಾವುದೇ ದಾಖಲೆಗಳೂ ಜನರ ಬಳಿ ಇರುವುದಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries