ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಮಧುಮೇಹ ಹೊಂದಿರುವ ಕೇರಳವು ಕಪ್ಪು ಶಿಲೀಂಧ್ರದ ವಿರುದ್ಧ ಹೆಚ್ಚು ಜಾಗರೂಕರಾಗಿರಬೇಕು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕಪ್ಪು ಶಿಲೀಂಧ್ರದಿಂದಾಗಿ ಉತ್ತರಾಖಂಡದ ರಿಷಿಕೇಶ್ ಏಮ್ಸ್ ಗೆ ದಾಖಲಾದ 50 ರೋಗಿಗಳಲ್ಲಿ 10 ಮಂದಿ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಆಸ್ಪತ್ರೆಯ ನೇತ್ರಶಾಸ್ತ್ರಜ್ಞ ಡಾ. ಅತುಲ್ ಎಸ್ ಪುತಲಂ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕಪ್ಪು ಶಿಲೀಂಧ್ರ ಸಂತ್ರಸ್ತರಿಗಾಗಿ ವಿಶೇಷ ವಾರ್ಡ್ ನ್ನು ನಿನ್ನೆ ಉತ್ತರಾಖಂಡ ಏಮ್ಸ್ನಲ್ಲಿ ಸ್ಥಾಪಿಸಲಾಗಿದೆ. ಈ ಪೈಕಿ 10 ಮಂದಿ ಚಿಕಿತ್ಸೆಯ ವಿಳಂಬದಿಂದಾಗಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ. ದಾಖಲಾದ ತೊಂಬತ್ತೊಂಬತ್ತು ಪ್ರತಿಶತ ರೋಗಿಗಳು ಮಧುಮೇಹಿಗಳು. ಮೂಗು ಮತ್ತು ಕಣ್ಣಿನ ನೋವು ಪ್ರಾಥಮಿಕ ಲಕ್ಷಣವಾಗಿದೆ. ದಾಖಲಾದವರಲ್ಲಿ ಸುಮಾರು 50 ಮಂದಿ ಕೊರೋನಾ ಸೋಂಕಿತರಾಗಿ ಗುಣಮುಖರಾಗಿದ್ದಾರೆ.
ಸುಮಾರು 70 ಪ್ರತಿಶತ ಕಪ್ಪು ಶಿಲೀಂಧ್ರ ಪ್ರಕರಣಗಳು ಪುರುಷರಲ್ಲಿ ವರದಿಯಾಗಿದೆ. ನಾಲ್ಕು ಭಾರತೀಯ ವೈದ್ಯರು 101 ಕಪ್ಪು ಶಿಲೀಂಧ್ರ ರೋಗಿಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಮಧುಮೇಹಿಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. 101 ರಲ್ಲಿ 83 ಮಧುಮೇಹಿಗಳು. 76 ಜನರು ಸ್ಟೀರಾಯ್ಡ್ ಔಷಧಿಗಳನ್ನು ತೆಗೆದುಕೊಂಡಿದ್ದರು. ಮೂಗು ಮತ್ತು ಸೈನಸ್ ಸಮಸ್ಯೆಗಳಿರುವವರ ಪೈಕಿ ಶೇ.89 ಜನರಲ್ಲಿ ಶಿಲೀಂಧ್ರಗಳ ಸೋಂಕು ಕಂಡುಬಂದಿದೆ. ಅಧ್ಯಯನದಲ್ಲಿ ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್‍ನ ರೋಗಿಗಳು ಸೇರಿದ್ದಾರೆ.
ಕಣ್ಣಿನ ತೀವ್ರ ನೋವು ಮತ್ತು ಕಣ್ಣುಗ¼ಲ್ಲಿ ಸುರಿಯುವ ನೀರು ಲಕ್ಷಣಗಳನ್ನು ಹೊಂದಿರುವ ಜನರಿಗೆ ತಕ್ಷಣ ಚಿಕಿತ್ಸೆ ನೀಡಬೇಕೆಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಚಿಕಿತ್ಸೆಯು ವಿಳಂಬವಾದರೆ, ಕಣ್ಣು ದೃಷ್ಟಿಹೀನವಾಗುತ್ತದೆ ಮತ್ತು ದೃಷ್ಟಿಯು ತ್ವರಿತವಾಗಿ ಕಣ್ಮರೆಯಾಗುತ್ತದೆ. ಮೂಗು ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ಕಪ್ಪು ಶಿಲೀಂಧ್ರದ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕೊರೋನಾ ಸೋಂಕಿನಿಂದ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಂಡಾಗ ಕಪ್ಪು ಶಿಲೀಂಧ್ರ ಆವರಿಸಿಕೊಳ್ಳುತ್ತದೆ ಎಂದು ತಜ್ಞರ ಅಭಿಪ್ರಾಯ.