ಪಾಲಕ್ಕಾಡ್: ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ದರವನ್ನು 500 ರೂ.ಗೆ ಇಳಿಸಲಾಗದು ಎಂದು ಖಾಸಗಿ ಲ್ಯಾಬ್‍ಗಳು ತಿಳಿಸಿವೆ. ಪಾಲಕ್ಕಾಡ್‍ನ ಖಾಸಗಿ ಲ್ಯಾಬ್‍ಗಳು ಆರ್‍ಟಿಪಿಸಿಆರ್ ಪರೀಕ್ಷೆಯನ್ನು ನಿಲ್ಲಿಸಿವೆ. ಇತರ ಜಿಲ್ಲೆಗಳಲ್ಲಿನ ಲ್ಯಾಬ್‍ಗಳು ಆರ್‍ಟಿಪಿಸಿಆರ್ ಪರೀಕ್ಷೆಯನ್ನು ನಿಲ್ಲಿಸುವ ಸಾಧ್ಯತೆಯಿದೆ.
ದರವನ್ನು 1,500 ರೂ.ಗೆ ಹೆಚ್ಚಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಕಳುಹಿಸಲಾಗುವುದು ಎಂದು ಲ್ಯಾಬ್ ಪ್ರಮುಖರು ತಿಳಿಸಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ 500 ರೂ.ಗಳ ದರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇತರ ಜಿಲ್ಲೆಗಳಲ್ಲಿ ವೈತ್ಯಸ್ತ ದರ ವಸೂಲುಮಾಡಲಾಗುತ್ತಿದ್ದು, ವಾಗ್ವಾದಗಳು ನಡೆಯುತ್ತಿರುವುದು ಕಂಡುವಬರುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಈಗಲೂ ಹಳೆಯ ದರದಲ್ಲೇ ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.