ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ವಯೋಜನರ ಆರೋಗ್ಯ ಸುರಕ್ಷೆ ಖಚಿತ ಪಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಸಮಾಜನೀತಿ ಇಲಾಖೆ ಸಿದ್ದಗೊಳಿಸಿದೆ. ಇದರ ಅಂಗವಾಗಿ ಕೋವಿಡ್ ವ್ಯಾಕ್ಸಿನೇಷನ್ ನೋಂದಣಿ ಹೆಲ್ಪ್ ಡೆಸ್ಕ್ ಮೇ 6ರಂದು ಕಾಞಂಗಾಡಿನಲ್ಲಿ ಆರಂಭಗೊಳ್ಳಲಿದೆ.
ಚಮ್ಮಟ್ಟಂವಯಲ್ ಸಯನ್ಸ್ ಪಾರ್ಕ್ ಕಟ್ಟಡದಲ್ಲಿ ಚಟುವಟಿಕೆ ನಡೆಸುತ್ತಿರುವ ವಯೋ ಕ್ಷೇಮ ಕಾಲ್ ಸೆಂಟರ್ ನಲ್ಲಿ ಈ ಸಹಾಯ ಕೇಂದ್ರ ಚಟುವಟಿಕೆ ನಡೆಸಲಿದೆ. ವಾಕ್ಸಿನೇಷನ್ ನೋಂದಣಿ ಸಂಬಂಧ ವಯೋಜನರು ಮೇ 31 ವರೆಗೆ ಈ ಕೇಂದ್ರಕ್ಕೆ ಕರೆಮಾಡಬಹುದು. ದೂರವಾಣಿ ಸಂಖ್ಯೆ: 04672289000.
ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಈ ಸಹಾಯ ಕೇಂದ್ರ ಚಟುವಟಿಕೆ ನಡೆಸಲಿದೆ. ನೋಂದಣಿ ಬಯಸುವ ವಯೋವೃದ್ಧರು ಆಧಾರ್ ಕಾರ್ಡ್ ನಂಬ್ರ, ಆಧಾರ್ ಕಾರ್ಡ್ ನಲ್ಲಿರುವ ರೀತಿಯ ಹೆಸರು, ವಿಳಾಸ, ಆಧಾರ್ ಕಾರ್ಡ್ ನಲ್ಲಿ ನಮೂದಿಸಲಾದ ಜನನ ದಿನಾಂಕ, ದೂರವಾಣಿ ಸಂಖ್ಯೆ, ಸಮೀಪದ ವಾಕ್ಸಿನೇಷನ್ ಕೇಂದ್ರ ಇತ್ಯಾದಿ ಮಾಹಿತಿ ನೀಡಬೇಕು.
ಜಿಲ್ಲೆಯ ವಯೋವೃದ್ಧರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ, ಇನ್ನೂ ಕೋವಿಡ್ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸದೇ ಇರುವವರಿಗೆ ನೋಂದಣಿ ನಡೆಸಲು ಸಹಾಯ ಒದಗಿಸುವುದು ಈ ಸಹಾಯ ಕೇಂದ್ರದ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ವಾಕ್ಸಿನೇಷನ್ ಲಭಿಸದೇ ಇರುವ ಎಲ್ಲ ವಯೋವೃದ್ಧರನ್ನು ಈ ಸೇವೆಯ ಸದುಪಯೋಗ ಮಾಡುವಂತೆ ಜಿಲ್ಲಾ ಸಮಾಜನೀತಿ ಅಧಿಕಾರಿ ಷೀಬಾ ಮುಂತಾಝ್ ತಿಳಿಸಿದರು.