ಕಾಸರಗೋಡು: ಹೊಸದುರ್ಗ ಜಿಲ್ಲಾ ಜೈಲಿನಲ್ಲಿ ಕೊಯ್ಲು ನಡೆಸಿದ 60 ಕಿಲೋ ಕುಂಬಳಕಾಯಿ ಅಂಬಲತ್ತರದ ಸ್ನೇಹಮನೆ ಬಡ್ಸ್ ಶಾಲೆಗೆ ಹಸ್ತಾಂತರಿಸಲಾಗಿದೆ.
ಹರಿತ ಕೇರಳಂ ಮಿಷನ್ ಮೂಲಕ ಹರಿತ ಜೈಲು ಆಗಿ ಮಾರ್ಪಟ್ಟಿರುವ ಹೊಸದುರ್ಗ ಜಿಲ್ಲಾ ಜೈಲಿನಲ್ಲಿ ಪೂರ್ಣರೂಪದಲ್ಲಿ ಜೈವಿಕ ಮಾದರಿ ಕೃಷಿ ಜಾರಿಗೊಳಿಸಲಾಗಿದೆ. ಕೃಷಿಗೆ ಅಗತ್ಯವಿರುವ ಗೊಬ್ಬರವನ್ನೂ ಜೈಲಿನಲ್ಲೇ ಉತ್ಪಾದಿಸಲಾಗುತ್ತಿದೆ. ಸುಮಾರು 100 ಕಿಲೋ ಬೆಳೆಯನ್ನು ಇಲ್ಲಿ ಉತ್ಪಾದಿಸಲಾಗಿದೆ. ಅದರಲ್ಲಿ 40 ಕಿಲೋ ಜೈಲಿನ ಅಗತ್ಯಕ್ಕೆ ಇರಿಸಿಕೊಂಡು ಉಳಿದ 60 ಕಿಲೋ ಬೆಳೆಯನ್ನು ಸ್ನೇಹಮನೆ ಬಡ್ಸ್ ಶಾಲೆಗೆ ಹಸ್ತಾಂತರಿಸಲಾಗಿದೆ. ಕಾಞಂಗಾಡು ಕೃಷಿಭವನದ ಪೂರ್ಣಬೆಂಬಲದೊಂದಿಗೆ ಈ ಕೃಷಿ ನಡೆಸಲಾಗಿತ್ತು.
ಈ ಸಂಬಂಧ ನಡೆದ ಸಮಾರಮಭದಲ್ಲಿ ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸಲನ್ ಅವರು ಸ್ನೇಹಮನೆ ಅಧ್ಯಕ್ಷ ನ್ಯಾಯವಾದಿ ರಾಜೇಂದ್ರನ್ ಅವರಿಗೆ ಬೆಳೆಯನ್ನು ಹಸ್ತಾಂತರಿಸಿದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಮುಖ್ಯ ಅತಿಥಿಯಾಗಿದ್ದರು. ಸಹಾಯಕ ವರಿಷ್ಠಾಧಿಕಾರಿ ಪಿ.ಗೋಪಾಲಕೃಷ್ಣನ್, ಡಿ.ಪಿ.ಒ. ಪುಷ್ಪರಾಜ್, ಎ.ಪಿ.ಒ.ಗಳಾದ ಸುರ್ಜಿತ್, ಪ್ರದೀಪನ್, ಶಶಿಧರನ್, ಸಂತೋಷ್, ವಿಪಿನ್ ಮೊದಲಾದವರು ಉಪಸ್ಥಿತರಿದ್ದರು.