ನವದೆಹಲಿ: ಬಾಬಾ ರಾಮ್ ದೇವ್ ಸ್ಥಾಪನೆಯ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವನ್ನು 60 ಕೋಟಿ ರೂ. ಗಳಿಗೆ ರುಚಿ ಸೋಯ ಖರೀದಿಸಿದೆ.
ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಪತಂಜಲಿಯ ನಿರ್ದೇಶಕ ಮಂಡಳಿ ಮೇ 10 ರಂದು ಉದ್ಯಮ ವರ್ಗಾವಣೆಗೆ ಅನುಮೋದನೆ ನೀಡಿದೆ.
ಸಂಸ್ಥೆಯ ಸ್ವಾಧೀನ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. "60 ಕೋಟಿ ರೂಪಾಯಿಗಳಿಗೆ ಪತಂಜಲಿ ಬಿಸ್ಕೇಟ್ ಉದ್ಯಮವನ್ನು ಖರೀದಿಸಲಾಗಿದೆ ಎಂದು ರುಚಿ ಸೋಯಾ ಇಂಡಸ್ಟ್ರೀಸ್" ಹೇಳಿಕೆ ನೀಡಿದೆ. "ಈಗಿರುವ ಉದ್ಯಮವನ್ನು ವಿಸ್ತರಣೆ ಮಾಡುವುದು ಖರೀದಿಯ ಉದ್ದೇಶವಾಗಿದೆ" ಎಂದು ಸೋಯಾ ಇಂಡಸ್ಟ್ರೀಸ್ ಹೇಳಿದೆ.