ಫ್ಲೋರಿಡಾ: ಮೆಕ್ಸಿಕೋದ 26 ವರ್ಷದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ.
ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆಂಡ್ರಿಯಾ ಭುವನ ಸುಂದರಿ ಕಿರೀಟ ಗೆದ್ದರೆ ಬ್ರೆಜಿಲ್ ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಆಗಿದ್ದಾರೆ.
ಈ ಬಾರಿ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್ ಆಗಿದ್ದಾರೆ.