ಕಾಸರಗೋಡು: ಕೋವಿಡ್ 19 ಹೆಚ್ಚಳ ಹಿನ್ನೆಲೆಯಲ್ಲಿ ಮಾಸ್ಕ್, ಪಲ್ಸ್ ಆಕ್ಸೋ ಮೀಟರ್ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ನಡೆಸುವ ಮೆಡಿಕಲ್ ಶಾಪ್ ಗಳಿಗೆ ಕಾಸರಗೋಡುಲೀಗಲ್ ಮೆಟ್ರೋಲಜಿ ಇಲಾಖೆ ತಪಾಸಣೆ ನಡೆಸಿದೆ. ಕಾನೂನು ರೀತಿಯದ್ದಲ್ಲದ ಪಲ್ಸ್ ಆಕ್ಸೋ ಮೀಟರ್, ಮಾಸ್ಕ್ ಪ್ಯಾಕೇಜ್ ಇತ್ಯಾದಿ ಪ್ರದರ್ಶನ ಮತ್ತು ಮಾರಾಟ ಮಾಡಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯ 6 ಮೆಡಿಕಲ್ ಶಾಪ್ ಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ಯಾಕೇಜ್ ಕಮಾಡಿಟಿ ಸಂಹಿತೆ ಪ್ರಕಾರದ ಮಾಹಿತಿ ನಮೂದಿಸದೇ ಇರುವ, ಎಂ.ಆರ್.ಪಿ.ಸ್ಟಿಕ್ಕರ್ ಲಗತ್ತಿಸಿ, ದರ ಹೆಚ್ಚಳಗೊಳಿಸಿದ ಪ್ಯಾಕೆಟ್ ಗಳನ್ನು ವಶಪಡಿಸಿ ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಲೀಗಲ್ ಮೆಟ್ರಾಲಜಿ ಇಲಾಖೆಗೆ ಸುದಾಯರ್ಂ ಎಂಬ ಮೊಬೈಲ್ ಆಪ್ ನಲ್ಲಿ ದಾಖಲೆಗಳ ಸಹಿತ ಅಪ್ ಲೋಡ್ ಮಾಡಬಹುದು. ತಾಲೂಕು ಸ್ಕ್ವಾಡ್ ಗಳು: ಮಂಜೇಶ್ವರ-9400064094, ಕಾಸರಗೋಡು-8281698129, ಹೊಸದುರ್ಗ-8281698131, ವೆಳ್ಳರಿಕುಂಡ್ -9400064093.