ತಿರುವನಂತಪುರ: ಕೇರಳದ ಶೇಕಡಾ 70 ರಷ್ಟು ಕರಾವಳಿ ಪ್ರದೇಶಗಳು ತೀವ್ರ ಸಮುದ್ರ ಕೊರೆತದ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸಮುದ್ರಕ್ಕೆ ತಡೆಗೋಡೆಗಳು ಅಲ್ಲಲ್ಲಿ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕೇಂದ್ರ ಪರಿಸರ ಇಲಾಖೆಯ ಸಂಶೋಧನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಭೀಕರ ಪರಿಸ್ಥಿತಿಯನ್ನು ಎದುರಿಸಲು ವೈಜ್ಞಾನಿಕ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಒತ್ತಾಯಿಸಿರುವರು.
ಕೇಂದ್ರ ಪರಿಸರ ಇಲಾಖೆಯ ಅಧ್ಯಯನದ ಪ್ರಕಾರ, ರಾಜ್ಯದಲ್ಲಿ 350 ಕಿ.ಮೀ ಕರಾವಳಿ ಕುಸಿತದ ಅಂಚಲ್ಲಿದ್ದು, ಮಾನ್ಸೂನ್ ಪ್ರಾರಂಭವಾಗುತ್ತಿದ್ದಂತೆ ಪರಿಸ್ಥಿತಿ ಹದಗೆಡುತ್ತದೆ. ಸುಮಾರು 63.3 ರಷ್ಟು ಕರಾವಳಿಯು ಅಲೆಗಳನ್ನು ತಡೆಯಲು ಸಮುದ್ರದಲ್ಲಿ ತಡೆಗೋಡೆ ಅಥವಾ ನೆಲೆಯನ್ನು ಹೊಂದಿದೆ. ಆದರೆ, ಇವುಗಳಲ್ಲಿ ಯಾವುದೂ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ವೈಜ್ಞಾನಿಕ ಪರಿಹಾರ ಕ್ರಮಗಳ ಅಗತ್ಯವಿದೆ ಎಂದು ಪರಿಸರ ಇಲಾಖೆ ಹೇಳಿದೆ.
ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಿರುವನಂತಪುರದ ಚೆಳಿಯೂರ್ ಮತ್ತು ಎರ್ನಾಕುಳಂನ ಚೆಲ್ಲಾನಂ ನಲ್ಲಿ ಸಮುದ್ರ ಮಟ್ಟದಲ್ಲಿ ಅತಿ ಹೆಚ್ಚು ಏರಿಕೆ ಕಂಡುಬಂದಿದೆ. ಈಗಾಗಲೇ ಮುಗಿದಿರುವ ಟೌಟ್ ಚಂಡಮಾರುತವು ಈ ಪ್ರದೇಶಗಳಲ್ಲಿ ತೀವ್ರ ಹಾನಿಯನ್ನುಂಟುಮಾಡಿತು. ತಿರುವನಂತಪುರ ಜಿಲ್ಲೆಯು ಶೇಕಡಾ 23 ರಷ್ಟು ಕರಾವಳಿಯನ್ನು ಹೊಂದಿದೆ ಮತ್ತು ಸಮುದ್ರ ಮಟ್ಟ ತೀವ್ರ ಏರಿಕೆ ಮತ್ತು ಕರಾವಳಿ ಸವೆತವನ್ನು ಎದುರಿಸುತ್ತಿದೆ.
ಕರಾವಳಿ ರಕ್ಷಣೆಗೆ ಸಮುದ್ರಕ್ಕೆ ತಡೆಗೋಡೆ ಮತ್ತು ಶಾಶ್ವತ ಪರಿಹಾರ ಎಂಬ ಸರ್ಕಾರದ ತಪ್ಪು ವರ್ತನೆ ಕೇರಳದ ಕರಾವಳಿ ಪ್ರದೇಶಗಳನ್ನು ನಾಶಪಡಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ರೀತಿಯ ವರ್ತನೆ ಕರಾವಳಿಯಲ್ಲಿ ವಾಸಿಸುವ ಸುಮಾರು ಒಂದು ಕೋಟಿ ಜನರ ಪ್ರಾಣ ಮತ್ತು ಸಮುದ್ರದಲ್ಲಿ ಅವರ ಜೀವನವನ್ನು ಕೊನೆಗೊಳಿಸುವ ಭೀತಿ ಇದೆ.