HEALTH TIPS

'ಟೌಕ್ಟೇ' ಚಂಡಮಾರುತದ ಹೊಡೆತಕ್ಕೆ ಬಾರ್ಜ್ ಮುಳುಗಡೆ: ನಾಪತ್ತೆಯಾಗಿದ್ದ 75 ಮಂದಿಯ ಪೈಕಿ 22 ಮಂದಿ ಸಾವು

         ನವದೆಹಲಿ: 'ಟೌಕ್ಟೇ' ಚಂಡಮಾರುತದ ಹೊಡೆತಕ್ಕೆ ಸಿಲುಕಿ ಅರೇಬಿಯನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದ Papaa-305 ಬಾರ್ಜ್ ದುರಂತದಲ್ಲಿ ನಾಪತ್ತೆಯಾಗಿದ್ದ 75 ಮಂದಿಯ ಪೈಕಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

       ಮುಂಬೈ ಕರಾವಳಿ ಪ್ರದೇಶದಲ್ಲಿ ಸುಮಾರು 35 ನಾಟಿಕಲ್ ಮೈಲು ದೂರದಲ್ಲಿ ದುರಂತಕ್ಕೀಡಾಗಿರುವ Papaa-305 ಬಾರ್ಜ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು 53 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

      ಸುಮಾರು 261 ಮಂದಿಯಿದ್ದ Papaa-305 ಬಾರ್ಜ್ 'ಟೌಕ್ಟೇ' ಚಂಡಮಾರುತದ ಹೊಡೆತಕ್ಕೆ ಸಿಲುಕಿ ಅರೇಬಿಯನ್ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಬಾರ್ಜ್ ನಲ್ಲಿದ್ದ 261 ಮಂದಿಯ ಪೈಕಿ 186 ಮಂದಿಯನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿತ್ತು.

      ಸೇನೆಯ ಕಮಾಂಡರ್ ಆಪರೇಷನ್ಸ್ ನ ನೇವಲ್ ಕಮಾಂಡ್ ಎಂ.ಕೆ. ಝಾ ಅವರು ಮಾತನಾಡಿ ಸಾವನ್ನಪ್ಪಿದವರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯಬೇಕಾಗಿದೆ. ಅಷ್ಟೇ ಅಲ್ಲ ಎಲ್ಲಾ ಸಾವು ಪ್ರಕರಣ ಪಿ.305 ಬಾರ್ಜ್ ನ ಸಿಬ್ಬಂದಿಗಳಿಗೆ ಸಂಬಂಧಿಸಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries