ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಅಂಕಿ ಅಂಶಗಳಲ್ಲಿ ಯಾವುದೇ ಇಳಿಕೆ ಇಲ್ಲದಿರುವುದರಿಂದ ಲಾಕ್‍ಡೌನ್ ವಿಸ್ತರಿಸುವ ಸಾಧ್ಯತೆಯಿದೆ. ಬುಧವಾರ ಅತಿ ಹೆಚ್ಚು ದೈನಂದಿನ ಹೆಚ್ಚಳ, ಸಾವು ಮತ್ತು ಪರೀಕ್ಷಾ ಸಕಾರಾತ್ಮಕ ದರಗಳು ದಾಖಲಾಗಿವೆ. ಕೇವಲ 12 ದಿನಗಳಲ್ಲಿ 745 ಮಂದಿ ಸೋಂಕಿತರು ಕೋವಿಡ್ ಗೆ ಬಲಿಯಾಗಿರುವರು.
ವಾರಾಂತ್ಯದ ಲಾಕ್‍ಡೌನ್ ಅಥವಾ ಮಿನಿ ಲಾಕ್‍ಡೌನ್ ಎರಡೂ ಫಲ ನೀಡಲು ಪ್ರಾರಂಭಿಸಿಲ್ಲ. ಸೋಂಕಿತರ ಸಂಖ್ಯೆ ಪ್ರತಿದಿನ 43,000 ದಾಟುತ್ತಿದೆ. ಕೋವಿಡ್ ಬಾಧಿತರ ಒಟ್ಟು ಸಂಖ್ಯೆ 20 ಲಕ್ಷ ದಾಟಿದೆ. ನಾಲ್ಕೂವರೆ ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 100 ಜನರನ್ನು ಪರೀಕ್ಷಿಸಿದಾಗ ವಿವಿಧ ಜಿಲ್ಲೆಗಳಲ್ಲಿ 30 ರಿಂದ 35 ಜ£ರಿಗೆ ಸೋಂಕು ದೃಢಗೊಳ್ಳುತ್ತಿದೆ. ಬುಧವಾರ ಒಂದೇದಿನ 95 ಮಂದಿ ಕೋವಿಡ್ ನಿಂದ ಮೃತಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.
21 ದಿನಗಳಲ್ಲಿ 1,054 ಜೀವಗಳು ಕಳೆದುಕೊಳ್ಳಲಾಗಿದೆ. ಐಸಿಯುನಲ್ಲಿ ಜನರ ಸಂಖ್ಯೆ 2,729 ಮತ್ತು ವೆಂಟಿಲೇಟರ್‍ನಲ್ಲಿರುವವರ ಸಂಖ್ಯೆ 1,446 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ತಜ್ಞರು ಹೇಳುವಂತೆ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಿದ್ದು, ಸರ್ಕಾರವು ಅಂಕಿಅಂಶಗಳನ್ನು ಮರೆಮಾಡುತ್ತಿದೆ ಎನ್ನಲಾಗಿದೆ.
ಎರ್ನಾಕುಳಂ, ಮಲಪ್ಪುರಂ, ಕೋಝಿಕ್ಕೋಡ್, ತಿರುವನಂತಪುರ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣಾತೀತವಾಗಿದೆ. ರಾಜ್ಯದಲಲಿ ಕೋವಿಡ್ ವಿಸ್ತರಣೆ ಉತ್ತುಂಗದತ್ತ ಸಾಗುತ್ತಿದೆ ಮತ್ತು ಲಾಕ್‍ಡೌನ್ ಮುಂದುವರಿಯಬೇಕು ಎಂಬುದು ಇತ್ತೀಚಿನ ಮಾಹಿತಿಯಾಗಿದೆ.