HEALTH TIPS

ಮೋದಿ ಸರ್ಕಾರ; ಕೇರಳವನ್ನು ಬೆಂಬಲಿಸಿ 7 ವರ್ಷಗಳು

                   ತಿರುವನಂತಪುರ: ಕೇಂದ್ರವು ರಾಜ್ಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಸಿದ್ದ  ರಾಜಕೀಯ ಹೇಳಿಕೆಗಳನ್ನು ಎಡ ಮತ್ತು ಬಲ ರಂಗಗಳು ನಿತ್ಯ ಜಪಿಸುತ್ತಿರುವ ಮಧ್ಯೆ ವಿಪತ್ತು ಕಾಲದಲ್ಲಿ ಕೇಂದ್ರ ಸರ್ಕಾರವು ಕೇರಳಕ್ಕೆ ನಿರಂತರ ಭರವಸೆಯ ನೆರವುಗಳೊಂದಿಗೆ ಕಾರ್ಯೋನ್ಮುಖವಾಗಿದ್ದದು ತಿಳಿದಿರುವ ನೈಜ ವಿಷಯ. 2016 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇರಳಕ್ಕೆ ಅರ್ಹವಾದ ಗಮನವನ್ನೂ ನೀಡಿದೆ. 

               ರಾಜಕೀಯಕ್ಕಿಂತ ರಾಷ್ಟ್ರ ದೊಡ್ಡದು ಎಂದು ಭಾವಿಸಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿತು. ಏತನ್ಮಧ್ಯೆ, ಕೇರಳಕ್ಕೆ ಅಗತ್ಯವಿದ್ದಾಗ ಹೇರಳವಾಗಿ ನೆರವು ನೀಡಲಾಯಿತು. ಆದರೂ ನಿರ್ಲಕ್ಷ್ಯದ ಪಲ್ಲವಿ ಪುನರಾವರ್ತನೆಯಾಯಿತು. ಎಡ ಮತ್ತು ಬಲ ರಂಗಗಳು ಮಾತ್ರವಲ್ಲದೆ ಕೇರಳದ ಕೆಲವು ಮುಖ್ಯವಾಹಿನಿಯ ಮಾಧ್ಯಮಗಳೂ ಮೋದಿ ವಿರೋಧಿ ವಾಕ್ಚಾತುರ್ಯವನ್ನು ತೋರಿಸಿವೆ. ಎಲ್ಲಾ ಆರೋಪಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಬಿಕ್ಕಟ್ಟಿನ ಸಂದರ್ಭದಲ್ಲಿ ಕೇರಳಕ್ಕೆ ಹೆಗಲಾಗಿಯೇ ಇತ್ತು. ಪುಟ್ಟಿಂಗಲ್ ಸಿಡಿಮದ್ದು ಸ್ಫೋಟದಿಂದ ರಾಜ್ಯ ಕಂಗಾಲಾಗಿದ್ದ ಸಂದರ್ಭ  ನರೇಂದ್ರ ಮೋದಿ ಅವರು ದೆಹಲಿ ಏಮ್ಸ್ನ ನ ತಜ್ಞ ವೈದ್ಯರ ತಂಡದೊಂದಿಗೆ 2016 ರಲ್ಲಿ ಕೊಲ್ಲಂಗೆ ಆಗಮಿಸಿದರು. ಹಿಂದಿರುಗಿದ ನಂತರ, ಸತ್ತವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ನೆರವು ನೀಡಿದ್ದರು.

              ಓಕಿ ಚಂಡಮಾರುತ, ಭೂಕುಸಿತದ ನಂತರವೂ ಮೀನುಗಾರರಿಗೆ ನೆರವು ನೀಡಲು ಕೇಂದ್ರವು ಮರೆಯಲಿಲ್ಲ. ದುರಂತದ ಸಮಯದಲ್ಲಿ, ಕೇಂದ್ರ ಸರ್ಕಾರವು ತಕ್ಷಣವೇ ವಿವಿಧ ಯೋಜನೆಗಳ ಮೂಲಕ ಮೀನುಗಾರರಿಗೆ `325 ಕೋಟಿ ಮತ್ತು ಸುಮಾರು 200 ಕೋಟಿ ರೂ. ನೆರವಿನ ಮಹಾಪೂರವನ್ನೇ ಹರಿಸಿತ್ತು. 2018 ರ ಮೊದಲ ಪ್ರವಾಹದಿಂದÀ ಧ್ವಂಸಗೊಂಡ ಕೇರಳದ ಜನರೊಂದಿಗೆ ಕೇಂದ್ರ ಸರ್ಕಾರ ದೃಢ ಭರವಸೆಗಳ ನೆರವು ನೀಡಿತ್ತು. `2904 ಕೋಟಿ ರೂ.ಗಳ ನೆರವಿನ ಜೊತೆಗೆ, ಹಾನಿಗೊಳಗಾದ ರಸ್ತೆಗಳು ಮತ್ತು ಸೇತುವೆಗಳ ಪುನರ್ನಿರ್ಮಾಣಕ್ಕೆ ವಿಶೇಷ ಹಂಚಿಕೆ ಮಾಡಲಾಗಿದೆ. ಎರಡನೇ ಪ್ರವಾಹದಲ್ಲಿ, ಕೇಂದ್ರ ಸರ್ಕಾರವು ಅಕ್ಷರಶಃ ಇತ್ತು. ಈ ಅವಧಿಯಲ್ಲಿ ಕೇರಳಕ್ಕೆ 460.77 ಕೋಟಿ ರೂ. ನೀಡಲಾಗಿತ್ತು.

           ಕೊರೋನಾದೊಂದಿಗೆ ನಲುಗುತ್ತಿರುವ ರಾಜ್ಯದ ಆತಂಕಕಾರಿ ಬೆಳವಣಿಗೆಯಲ್ಲಿ ಇಂದು ಕೇಂದ್ರದ ನೆರವು ಊಹಾತೀತ.  ಆರ್ಥಿಕ ಸಹಾಯದ ಜೊತೆಗೆ, ಕೇಂದ್ರವು ಪ್ರತಿ ಮಲಯಾಳಿ ಕುಟುಂಬಕ್ಕೆ ಉಚಿತ ಆಹಾರ ಕಿಟ್‍ಗಳನ್ನು ಸಹ ನೀಡುತ್ತಿದೆ.  ಆದರೆ ರಾಜ್ಯಕ್ಕೆ ಮಂಜೂರು ಮಾಡಿದ ಹಣವನ್ನು ಬೇರೆಡೆಗೆ ಬಳಸಿ  ಕೋಟ್ಯಂತರ ರೂಪಾಯಿ ವ್ಯರ್ಥವಾಗಿದ್ದನ್ನು ಕೇರಳ ಇನ್ನೂ ಗಮನಿಸಿದಂತಿಲ್ಲ. ಕೇರಳದ ನೆಲದಲ್ಲಿ ಒಂದಲ್ಲ ಅನೇಕ ಕೇಂದ್ರ ಯೋಜನೆಗಳು ಜಾರಿಗೊಂಡಿವೆ.  ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಲೈಫ್ ಮಿಷನ್ ಹೆಸರಿನಲ್ಲಿ ಅಪಹರಿಸಿದಾಗಲೂ ಮಲಯಾಳಿಗಳು ಕೇಂದ್ರ ಸರ್ಕಾರದತ್ತ ತಿರಸ್ಕಾರವನ್ನೇ ಬೀರಿರುವುದು ಕರಾವಳಿಯ ಉಪ್ಪು ವಾತಾವರಣದ ಕಾರಣವಾಗಿರಬಹುದು!. ಪ್ರಧಾನ್ ಮಂತ್ರಿ ಮುದ್ರಾ ಯೋಜನ,  ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ, ಸುಕನ್ಯಾ ಸಮೃದ್ಧಿ ಯೋಜನೆ, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು, ಪ್ರಧಾನ್ ಮಂತ್ರಿ ಉಜ್ವಲ್ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಸೇರಿದಂತೆ 55 ಕ್ಕೂ ಹೆಚ್ಚು ಕೇಂದ್ರ ಯೋಜನೆಗಳನ್ನು ಕೇರಳ ಜಾರಿಗೊಳಿಸಿದೆ. 

                ಇಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ರಾಷ್ಟ್ರದ ಚುಕ್ಕಾಣಿ ಹಿಡಿದು ಬರೋಬರಿ ಏಳು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಈ ಅವಲೋಕನ ಪ್ರಸ್ತುತವೆಂದು ಪ್ರಕಟಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries