ಮಂಜೇಶ್ವರ: ಕೇಂದ್ರ ಸರ್ಕಾರದ 7 ನೇ ವರ್ಷಚಾರಣೆ ಅಂಗವಾಗಿ ನೀರೊಳಿಕೆಯ ಶ್ರೀ ಮಾತ ಸೇವಾಶ್ರಮ ಮತ್ತು ಸಾಯಿ ನಿಕೇತನ ಸೇವಾಶ್ರಮ ಕ್ಕೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಯವರ ನೇತೃತ್ವದಲ್ಲಿ ಭೇಟಿ ನೀಡಿ ಅಕ್ಕಿ ಇನ್ನಿತರ ಸಾಮಗ್ರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ವರ್ಕಾಡಿ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಚೆಂಡೇಲ್, ಯತಿರಾಜ್, ಕೃಷ್ಣಪ್ಪ ಮಡಿಕಾಪು, ಯುವಮೋರ್ಚಾ ಪಂಚಾಯತಿ ಘಟಕದ ಅಧ್ಯಕ್ಷ ರಕ್ಷಣ್ ಅಡೆಕಳಕಟ್ಟೆ, ಸಾಯಿ ಸೇವಾಶ್ರಮದ ಡಾ.ಉದಯಕುಮಾರ್, ಶ್ರೀ ಮಾತ ಆಶ್ರಮ ಅಧ್ಯಕ್ಷ ಖಿ ನಾರಾಯಣ ಭಟ್, ಮಾತಾಶ್ರೀ ಪ್ರಭಾವತಿ ಟೀಚರ್ ಉಪಸ್ಥಿತರಿದ್ದರು.