ಕಾಸರಗೋಡು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತಲೆದೋರುತ್ತಿರುವ ಕಡಲ್ಕೊರೆತ ನಿಯಂತ್ರಣ ಚಟುವಟಿಕೆಗಳಿಗಾಗಿ 9 ಜಿಲ್ಲೆಗಳಿಗೆ 10 ಕೋಟಿ ರೂ. ಮೂಜೂರು ಮಾಡಲಾಗಿದೆ.
ಚೆಲ್ಲಾನಂ ವಲಯದ ಕಡಲ್ಕೊರತೆ ಸಂಬಂಧ ಮಾತುಕತೆ ನಡೆಸಲು ಉದ್ದಿಮೆ ಸಚಿವ ಪಿ.ರಾಜೀವ್, ಮೀನುಗಾರಿಕೆ-ಸಂಸ್ಕøತಿ ಸಚಿವ ಸಜಿ ಚೆರಿಯಾನ್, ನೀರಾವರಿ ಸಚಿವ ರೋಷಿ ಆಗಸ್ಟಿನ್, ಸಂಚಾರ ಸಚಿವ ಆಂಟನಿ ರಾಜು ಅವರ ಸಮಕ್ಷದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಂಜೂರು ಗೊಂಡಿರುವ ನಿಧಿಯಲ್ಲಿ 2 ಕೋಟಿ ರೂ. ಚೆಲ್ಲಾನಂ ವಲಯಕ್ಕೆ ಮೀಸಲಿರಿಸಲಾಗಿದೆ. ಕರಾವಳಿ ಪ್ರದೇಶಗಳ ಸಂರಕ್ಷಣೆಗೆ ಟೆಟ್ರಾಪೆÇೀಡ್ ಬಳಸಿ ಸಂರಕ್ಷಣೆ ಕವಚ ನಿರ್ಮಿಸುವ ಕ್ರಮ ತ್ವರಿತವಾಗಿ ನಡೆಸಲು ಸಭೆ ಸಲಹೆ ಮಾಡಿದೆ. ಈ ವಿಚಾರದಲ್ಲಿ ನೀರಾವರಿ ಸಿ.ಇ.ಒ. ಮತ್ತು ಐ.ಡಿ.ಆರ್.ಬಿ. ನಿರ್ದೇಶಕರಿಗೆ ಹೊಣೆ ನೀಡಲಾಗಿದೆ.
ಚೆಲ್ಲಾನಂ ಕರಾವಳಿ ನಿವಸಿಗಳು ಅನುಭವಿಸುತ್ತಿರುವ ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಚೆಲ್ಲಾನಂ ನ್ನು ಮಾದರಿ ಗ್ರಾಮವಾಗಿಸುವ ಯೋಜನೆ ಸಿದ್ಧಪಡಿಸಲು ವಿವಿಧ ಸರಕಾರಿ ಇಲಾಖೆಗಳ, ಕೊಚ್ಚಿಯ ವಿವಿಗಳಿಗೆ ಹೊಣೆ ನೀಡಲಾಗುವುದು.
ಎಲ್ಲ ಕರಾವಳಿ ಜಿಲ್ಲೆಗಳ ಸಚಿವರುಗಳ ಪಾಲ್ಗೊಳ್ಳುವಿಕೆಯೊಂದಿಗಿನ ಸಭೆ ಈ ತಿಂಗಳ 27ರ ಮುಂಚಿತವಾಗಿ ನಡೆಸಲಾಗುವುದು. ಚೆಲ್ಲಾನಂ ನಲ್ಲಿ ಜಿಯೋ ಬ್ಯಾಗ್ ಬಳಸಿ ಜಾರಿಗೊಳಿಸುವ 35 ಲಕ್ಷ ರೂ.ನ ಯೋಜನೆ, ವಿಜಯನ್ ಕನಾಲ್ ಉಪ್ಪುತೋಡು ಇತ್ಯಾದಿಗಳಿಂದ ಮಣ್ಣು ತೆರವುಗೊಳಿಸುವ 5 ಲಕ್ಷ ರೂ.ನ ಯೋಜನೆ ಪೂರ್ತಿಗೊಳಿಸಲಾಗುವುದು. ಮಳೆಗಾಲದ ಮುನ್ನ ಎಲ್ಲ ಜಿಲ್ಲೆಗಳಿಗೂ ಮಂಜೂರು ಮಾಡಲಾದ ತಲಾ 30 ಲಕ್ಷ ರೂ.ನ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು. ಚೆಲ್ಲಾನಂನಲ್ಲಿ ಮಣ್ಣು ತುಂಬಿಕೊಂಡ ಪ್ರದೇಶದಲ್ಲಿ ಪರಿಹಾರ ಕ್ರಮ ಶೀಘ್ರದಲ್ಲೇ ಆರಂಭಿಸಲೂ ಸಭೆ ನಿರ್ಧರಿಸಿದೆ.
ಸಭೆಯಲ್ಲಿ ಶಾಸಕರಾದ ಪಿ.ಪಿ.ಚಿತ್ತರಂಜನ್, ಕೆ.ಜೆ.ಮಾಕ್ಸಿ, ಪ್ರಧಾನ ಕಾರ್ಯದರ್ಶಿ ಟಿ.ಕೆ.ಜೋಸ್ ಮೊದಲಾದವರು ಭಾಗವಹಿಸಿದ್ದರು.