ತಿರುವನಂತಪುರ: ಕೋವಿಡ್ ನಿಯಂತ್ರಣದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಭದ್ರತೆಯನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇತರರು ಅಸಡ್ಡೆ ವಹಿಸುತ್ತಿರುವ ಬಗ್ಗೆ ಕಂಡುಬಂದರೆ ಜಾಗೃತಿ ಮೂಡಿಸಲು ಸಿದ್ಧರಾಗಿರಬೇಕು. ಏರ್ ಹೋಲ್ ಗಳಿರುವ ಮಾಸ್ಕ್ ಗಳನ್ನು ಧರಿಸದಿರುವುದು ಉತ್ತಮ ಎಂದು ಅವರು ಸೂಚಿಸಿರುವರು. .
ಬಟ್ಟೆ ಮಾಸ್ಕ್ ಗಳನ್ನು ಎನ್ 95 ಜೊತೆಗೆ ಅಥವಾ ಶಸ್ತ್ರಚಿಕಿತ್ಸೆಯ ಮಾಸ್ಕ್ ಗಳ ಮೇಲೆ ಧರಿಸಬೇಕು. ಮನೆಯಲ್ಲಿ ಆಮ್ಲಜನಕವನ್ನು ಉತ್ಪಾದಿಸಬಹುದು ಎಂಬ ಪ್ರಚಾರವು ಆಧಾರರಹಿತ ಮತ್ತು ಅಪಾಯಕಾರಿ. ಇಂತಹ ಅವೈಜ್ಞಾನಿಕ ಸುದ್ದಿಗಳನ್ನು ಹರಡಬಾರದು ಮತ್ತು ನಂಬಿಕೆಗೆ ಅನರ್ಹ ಎಂದವರು ತಿಳಿಸಿದರು.