ತಿರುವನಂತಪುರ: ರಾಜ್ಯ ಸರ್ಕಾರ ಕೊರೋನಾ ರಕ್ಷಣಾ ಸಾಧನಗಳ ದರವನ್ನು ಹೆಚ್ಚಿಸಿದೆ. ಕೇಳಿಬಂದಿರುವ ಒತ್ತಡಗಳ ಹಿನ್ನೆಲೆಯಲ್ಲಿ ಬೆಲೆಗಳ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಲಾಗಿದೆ. ವಾಣಿಜ್ಯಿಕವಾಗಿ ಲಭ್ಯವಿರುವ ರಕ್ಷಣಾ ಸಾಧನಗಳ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. ಸರ್ಕಾರ 15 ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ.
ಪಿಪಿಇ ಕಿಟ್‍ನ ಬೆಲೆ 328 ರೂ (ಹಿಂದಿನ ರೂ. 273), ಎನ್ 95 ಮಾಸ್ಕ್ ರೂ 26 (ಹಿಂದಿನ ರೂ 22) ಮತ್ತು ಪಲ್ಸ್ ಆಕ್ಸಿಮೀಟರ್ 1,800 ರೂ (ಹಿಂದಿನ 1,500 ರೂ).ಗಳ ವರೆಗೆ ಹೆಚ್ಚಿಸಲಾಗಿದೆ. ಇದಲ್ಲದೆ, ಮೂರು-ಲೇಯರ್ ಮಾಸ್ಕ್ ಗಳ ಬೆಲೆಯನ್ನು 3 ರಿಂದ 5 ರೂಗಳಿಗೆ ಹೆಚ್ಚಿಸಲಾಗಿದೆ.
ಪೇಸ್ ಶೀಲ್ಡ್ ಗೆ ಹೊಸ ಬೆಲೆ 25 ಮತ್ತು ಏಪ್ರನ್ ಗೆ 14 ರೂ.ದರ ನಿಗದಿಪಡಿಸಲಾಗಿದೆ. 500 ಎಂಎಲ್ ಹ್ಯಾಂಡ್ ಸ್ಯಾನಿಟೈಜರ್‍ನ ಪರಿಷ್ಕøತ ಬೆಲೆ 230 ರೂ (ಹಿಂದಿನ ಬೆಲೆ 192). 200 ಎಂಎಲ್ -118 ರೂ., ಮತ್ತು 100 ಎಂಎಲ್ ಬಾಟಲಿ ಬೆಲೆ -66 ರೂ. ಆಗಿರುತ್ತದೆ. ಸರ್ಜಿಕಲ್ ಗೌನ್‍ನ ಬೆಲೆ 65 ರೂ.ನಿಂದ 78 ರೂ.ಗೆ ಏರಿಕೆ ಮಾಡಲಾಗಿದೆ. ಟೆಸ್ಟ್ ಕೈಗವಸುಗಳು - 7 ರೂ., ಡ್ರೈ ಕೈಗವಸುಗಳು - 18 ರೂ, ಆಗಿರಲಿವೆ. ಪರಿಷ್ಕೃತ ಬೆಲೆಗಳು ಮಾಸ್ಕ್ -96 ರೂ, ಆಕ್ಸಿಜನ್ ಮಾಸ್ಕ್ -65 ಮತ್ತು ಫೆÇ್ಲೀಮೀಟರ್ -1824 ರೂ.ಗಳಾಗಿರಲಿವೆ.
ಕೇರಳ ವೈದ್ಯಕೀಯ ಸೇವೆಗಳ ನಿಗಮ ಲಿಮಿಟೆಡ್, ಸರ್ಕಾರವು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಿದರೆ ನಷ್ಟಕ್ಕೊಳಗಾಗಬೇಕಾಗುತ್ತದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಬೆಲೆ ಬದಲಾವಣೆಯನ್ನು ಮಾಡಲಾಗಿದೆ. ಈ ಹಿಂದೆ, ಕೊರೋನಾ ಸಾಮಗ್ರಿಗಳಿಗೆ ಅನ್ಯಾಯವಾಗಿ ಬೆಲೆ ನೀಡಲಾಗುತ್ತಿದೆ ಎಂಬ ದೂರು ಬಂದ ಬಳಿಕ ಸರ್ಕಾರ ಮಧ್ಯಪ್ರವೇಶಿಸಿತ್ತು.