ತಿರುವನಂತಪುರ: ರಾಜ್ಯದಲ್ಲಿ ವ್ಯಾಪಕ ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‍ಡೌನ್ ನ್ನು ಮತ್ತೆ ವಿಸ್ತರಿಸಲಾಗಿದೆ. ಜೂನ್ 9 ರವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಏಪ್ರಿಲ್ 30 ರಂದು ಘೋಷಿಸಲಾಗಿದ್ದ ಲಾಕ್‍ಡೌನ್ ನಾಳೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಲಾಯಿತು. ಇದು ಹೆಚ್ಚಿನ ರಿಯಾಯಿತಿಗಳನ್ನು ಅನುಮತಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣವು ನಿನ್ನೆ ಶೇಕಡಾ 16.5 ರಷ್ಟಿತ್ತು. ಲಾಕ್ ಡೌನ್ ನಿರ್ಬಂಧಗಳು ಸಕಾರಾತ್ಕ ದರ ಶೇಕಡಾ 10 ಕ್ಕಿಂತ ಕಡಿಮೆಯಾಗುವವರೆಗೂ ಮುಂದುವರಿಯಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರದಂತೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುವುದು. ಅಕ್ಕಸಾಲಿಗರು, ಬಟ್ಟೆ ಅಂಗಡಿ, ಶೂ ಅಂಗಡಿ, ಮತ್ತು ಮಕ್ಕಳ ಬಟ್ಟೆ ಅಂಗಡಿಗಳನ್ನು ನಿಬಂಧನೆಗÀಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.
ಮನೆ ವಿತರಣೆಯನ್ನು ಸಹ ಪೆÇ್ರೀತ್ಸಾಹಿಸಲಾಗುವುದು. ಸಣ್ಣ ಉದ್ಯಮಗಳಿಗೆ 50 ಪ್ರತಿಶತದಷ್ಟು ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಅವಕಾಶವಿರುತ್ತದೆ.
ಬಿಡಿಭಾಗಗಳ ಅಂಗಡಿಗಳಿಗೆ ರಿಯಾಯಿತಿಯನ್ನು ಸಹ ನೀಡುವ ಸಾಧ್ಯತೆಗಳಿವೆ. ಶರಾಬು ಅಂಗಡಿಗಳನ್ನು ನಿರ್ಭಂಧಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಬಹುದು. ಲಾಕ್‍ಡೌನ್ ಹಿಂಪಡೆದ ಬಳಿಕವಷ್ಟೇ ಬಾರ್‍ಗಳ ಕಾರ್ಯನಿರ್ವಹಣೆಗೆ ಅನುಮತಿಸಲಾಗುವುದೆಮದು ತಿಳಿದುಬಂದಿದೆ.
ವಿನಾಯಿತಿಗಳ ಕುರಿತು ಅಂತಿಮ ನಿರ್ಧಾರವನ್ನು ಇಂದು ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೊರೋನಾ ಪರಿಶೀಲನೆಯ ನಂತರ ಪ್ರಕಟಿಸಲಿದ್ದಾರೆ.