ಕಾಸರಗೋಡು: ಕೋವಿಡ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಮಾನವ ಸಂಪರ್ಕ ಮತ್ತು ಸಂಚಾರ ಕಡಿಮೆಗೊಳಿಸುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯಿದ್ದಲ್ಲಿ ಮಾತ್ರ ಸಾಕು ಪ್ರಾಣಿಗಳನ್ನು ಆಸ್ಪತ್ರೆಗೆ ಒಯ್ಯಬೇಕು ಮತ್ತು ಮೃಗಾಸ್ಪತ್ರೆ ಸಿಬ್ಬಂದಿಯನ್ನು ಮನೆಗಳಿಗೆ ಕರೆಸಿಕೊಳ್ಳಬೇಕು ಎಂದು ಜಿಲ್ಲಾ ಮೃಗಸಂರಕ್ಷಣೆ ಅಧಿಕಾರಿ ತಿಳಿಸಿರುವರು.
ಮೃಗಾಸ್ಪತ್ರೆ ಸಿಬ್ಬಂದಿಗೆ ಮೊದಲು ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿ ನಂತರ ಅಗತ್ಯದ ಕ್ರಮ ಕೈಗೊಳ್ಳಬೇಕು. ಅನಿವಾರ್ಯ ಅಲ್ಲದೇ ಇರುವ ನಿಟ್ಟಿನಲಿ ಚಿಕಿತ್ಸೆ ಮುಂದೂಡಬೇಕು. ಹಟ್ಟಿ, ಗೂಡು ಇತ್ಯಾದಿಗಳನ್ನು ಶುಚಿಗೊಳಿಸಿ, ರೋಗಾಣುಮುಕ್ತವಾಗಿರಿಸಬೇಕು. ಸಾಮಾನ್ಯ ವ್ಯಕ್ತಿಗತ ಶುಚಿತ್ವ ಕಾಯ್ದುಕೊಳ್ಳಬೇಕು. ಈ ಮೂಲಕ ಸಾಮಾಜಿಕ ಸಂರಕ್ಷಣೆಯೂ ನಡೆಯುವಂತೆ ಗಮನಿಸಬೇಕು ಎಂದವರು ತಿಳಿಸಿರುವರು.