ತಿರುವನಂತಪುರ: ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಮತ್ತು ಜನರೊಂದಿಗೆ ಸಂವಹನ ನಡೆಸಿ ಇದಕ್ಕಾಗಿ ಸಲಹೆಗಳನ್ನು ಸಂಗ್ರಹಿಸುತ್ತದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್. ಅನಿಲ್ ಹೇಳಿರುವರು. ಲೈವ್-ಫೆÇೀನ್-ಇನ್ ಈವೆಂಟ್ ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2 ರಿಂದ 3 ರವರೆಗೆ ನಡೆಯಲಿದೆ. ದೂರವಾಣಿ ಸಂಖ್ಯೆ ಮತ್ತು ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದರು.
ಆಹಾರ ಇಲಾಖೆಯ ಕಾರ್ಯವೈಖರಿಯಲ್ಲಿ ಹೆಚ್ಚಿನ ಸುಧಾರಣೆ ಮತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಸಚಿವರಿಗೆ ನೇರವಾಗಿ ತಿಳಿಸಬಹುದು. ಇದಲ್ಲದೆ, ಟೋಲ್ ಫ್ರೀ ಸಂಖ್ಯೆ 1967 ಮತ್ತು ಪೆÇೀರ್ಟಲ್ pg.civilsupplieskerala.gov.in ಈಗಾಗಲೇ ಸಾರ್ವಜನಿಕರಿಗೆ ದೂರು ನೀಡಲು ಲಭ್ಯವಿದೆ.
18 ರಿಂದ 45 ವರ್ಷದೊಳಗಿನ ಜನರಿಗೆ ಕೊರೋನಾ ಲಸಿಕೆ ನೀಡುವಲ್ಲಿ ಪಡಿತರ ಕಾರ್ಮಿಕರನ್ನು ಮುಂಚೂಣಿಯಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ. ಎಫ್ ಸಿ ಐ ಗೋಡೌನ್ ಕಾರ್ಮಿಕರನ್ನು ಈಗ ಈ ವರ್ಗದಲ್ಲಿ ಸೇರಿಸಲಾಗಿದೆ. ಸಾರ್ವಜನಿಕ ವಿತರಣಾ ಜಾಲದಲ್ಲಿ ಇತರರನ್ನು ವ್ಯಾಕ್ಸಿನೇಷನ್‍ಗೆ ಆದ್ಯತೆಯನ್ನಾಗಿ ಮಾಡುವ ವಿಷಯವು ಸಕ್ರಿಯ ಪರಿಗಣನೆಯಲ್ಲಿದೆ ಎಂದು ಅವರು ಹೇಳಿದರು.
ಪಡಿತರ ವ್ಯಾಪಾರಿಗಳು ಸೇರಿದಂತೆ ಜನರಲ್ಲಿ ಕೊರೋನಾ ಸೋಂಕಿನ ಅಪಾಯವಿರುವುದರಿಂದ ಅಂತಹ ವ್ಯಕ್ತಿಗಳ ವಿಮಾ ಪರಿಗಣನೆÉ ಪರಿಶೀಲಿಸಲಾಗುವುದು. ಆದಷ್ಟು ಬೇಗ ಹೊಸ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 8000 ಹೊಸ ಕಾರ್ಡ್‍ಗಳನ್ನು ನೀಡಲಾಗಿದೆ. ಅನೇಕ ಅಪ್ಲಿಕೇಶನ್‍ಗಳು ತಾಂತ್ರಿಕ ಸಮಸ್ಯೆಗಳಿಂದ ತೊಡಕಿನಲ್ಗಿದೆ. ಆನ್‍ಲೈನ್‍ನಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಜೊತೆಗೆ ಕಾರ್ಡ್ ನ್ನು ಆನ್‍ಲೈನ್‍ನಲ್ಲಿ ಡೌನ್ ಲೋಡ್ ಮಾಡಬಹುದು ಎಂದರು.
ಕೊರೋನಾ ಕಾಲಘಟ್ಟದಲ್ಲಿ ನಾಗರಿಕ ಸರಬರಾಜು ನಿಗಮದ ಆನ್‍ಲೈನ್ ವಿತರಣಾ ವ್ಯವಸ್ಥೆಯು ಈಗ 107 ಸ್ಥಳಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ವಿಸ್ತರಿಸಲು ಪರಿಗಣಿಸುವುದಾಗಿ ಸಚಿವರು ಹೇಳಿದರು.