ಕೊಚ್ಚಿ: ಎಲ್ಲಾ ಸಸ್ಯಜನ್ಯ ಎಣ್ಣೆಗಳ ಬೆಲೆ ಏರಿಕೆಯಾಗುವುದರೊಂದಿಗೆ, ತೆಂಗಿನ ಎಣ್ಣೆಯ ಬೆಲೆ ಮಾತ್ರ ಇಳಿಕೆಯಲ್ಲಿರುವುದು ಅನುಮಾನಕ್ಕೆ ಕಾರಣವಾಗಿದೆ. ಹಠಾತ್ತನೆ ಕೊಬ್ಬರಿ ಬೆಲೆ 300-40 ರೂ. ಗಳಷ್ಟೆಲ್ಲ ಇಳಿಕೆಯಾಗಿರುವುದು ರೈತರಿಗೆ ಮತ್ತು ಸಣ್ಣ ಮಿಲ್ಲರ್ ಗಳಿಗೆ ಹಾನಿಕಾರಕವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ತೆಂಗಿನೆಣ್ಣೆಯ ಅಗತ್ಯ ಕುಸಿಯುತ್ತಿದೆಯೆಂದೂ, ಆದಸ್ದರಿಂದ ಕೊಬ್ಬರಿಗೆ ಬೇಡಿಕೆ ಇಲ್ಲ. ಇಂತಹ ಸ್ಥಿತಿ ತಾತ್ಕಾಲಿಕ. ಇಂತಹ ಸನ್ನಿವೇಶಗಳ ಲಾಭಪಡೆದು ಕೊಬ್ಬರಿ ಮತ್ತು ತೆಂಗಿನೆಣ್ಣೆಯ ಬೆಲೆ ಇಳಿಕೆಗೊಳ್ಳಲು ಕೆಲವು ಮಧ್ಯವರ್ತಿಗಳು(ಲಾಬಿ) ಶ್ರಮಿಸುತ್ತಿರುವರೆಂದು ಕೇಳಿಬಂದಿದೆ.
ಅಂತೆಯೇ, ಕೇರಳದ ಕೊಬ್ಬರಿ ರೈತರನ್ನು ರಕ್ಷಿಸಲು ರಾಜ್ಯದಲ್ಲಿ ಕೇರ ಫ್ರಂಟ್ ಎಂಬ ವ್ಯವಸ್ಥೆ ಇದೆ. ಆದರೆ ಕೇರ ಫ್ರಂಟ್ ನ ಇತ್ತೀಚೆಗಿನ ಹಲವು ಚಟುವಟಿಕೆಗಳು ಹೆಚ್ಚು ಪ್ರಶ್ನಾರ್ಹವಾಗಿವೆ.
ದಿನಕ್ಕೆ 400 ರೂ.ಗೆ ಬೆಲೆಯನ್ನು ಹೆಚ್ಚಿಸಿ ಬಳಿಕ ಮರುದಿನವೂ ಮಾರುಕಟ್ಟೆ ಬೆಲೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಪ್ರಶ್ನಾರ್ಹವಾಗಿದೆ. ಕೊಬ್ಬರಿ ಯುಗದಲ್ಲಂತೂ, ಮಾರುಕಟ್ಟೆ ಬೆಲೆ ಈಗಿನಂತೆ ಇಳಿದಿರಲಿಲ್ಲ.
ತೆಂಗಿನ ಎಣ್ಣೆ ಬೆಲೆ ಕುಸಿತ ಮತ್ತು ವ್ಯಾಪಾರ ಕುಸಿತದಿಂದಾಗಿ ಸಣ್ಣ ಮಿಲ್ಲರ್‍ಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಸಣ್ಣ ತೈಲ ಮಿಲ್ಲರ್‍ಗಳು ತೆಗೆದುಕೊಳ್ಳುವ ಸಾಲಗಳ ಮೇಲಿನ ಬಡ್ಡಿರಹಿತ ಸಾಲವನ್ನು ಮುಂದೂಡಬೇಕು ಮತ್ತು ಸರ್ಕಾರಕ್ಕೆ ಪಾವತಿಸುವ ತೆರಿಗೆಯನ್ನು ಒಂದು ವರ್ಷದವರೆಗೆ ಮುಂದೂಡಬೇಕೆಂದು ಕೊಚ್ಚಿನ್ ಆಯಿಲ್ ಮಚೆರ್ಂಟ್ಸ್ ಅಸೋಸಿಯೇಶನ್ (ಕೋಮಾ) ಒತ್ತಾಯಿಸಿದೆ.