ತಿರುವನಂತಪುರ: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸಾರ್ವಜನಿಕ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿಗಳಿಗೆ ಪ್ರವೇಶ ಆನ್‍ಲೈನ್‍ನಲ್ಲಿ ಪ್ರಾರಂಭವಾಗಿದೆ. ಸಂಪೂರ್ಣ ಪೆÇೀರ್ಟಲ್ ಮೂಲಕ ಅಥವಾ ಮುಖ್ಯ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಮೂಲಕವೂ ಪ್ರವೇಶವನ್ನು ಪಡೆಯಬಹುದು.
ಜೂನ್ ತಿಂಗಳಲ್ಲಿ ಶಾಲೆ ತೆರೆದಿರದಿದ್ದರೆ ಕೇಂದ್ರೀಕೃತ ಆನ್‍ಲೈನ್ ತರಗತಿಗಳ ಜೊತೆಗೆ, ಪ್ರತಿ ಶಾಲೆಯು ಪ್ರತ್ಯೇಕ ಆನ್‍ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗುತ್ತದೆ. ಒಂದರಿಂದ ಒಂಬತ್ತರವರೆಗಿನ ಮಕ್ಕಳಿಗೆ ಜೂನ್ 1 ರಿಂದ ವಿಕ್ಟರ್ಸ್ ಮೂಲಕ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಹತ್ತನೇ ತರಗತಿ ಮತ್ತು ಪ್ಲಸ್ ಟು ವಿದ್ಯಾರ್ಥಿಗಳು ಮೊದಲ ಹತ್ತು ದಿನಗಳವರೆಗೆ ಶಿಕ್ಷಕರನ್ನು ವೈಯಕ್ತಿಕವಾಗಿ ಭೇಟಿಯಾಗಬೇಕು. ಜೂನ್ 14 ರೊಳಗೆ ಶಿಕ್ಷಕರು ನೇರವಾಗಿ ಆನ್‍ಲೈನ್‍ನಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
ಲಾಕ್‍ಡೌನ್ ಮುಂದುವರಿದರೆ, ಆಗಸ್ಟ್ ವೇಳೆಗೆ ಎಂಟನೇ ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಂತಹ ತರಗತಿಗಳನ್ನು ನಡೆಸಲು ಯೋಜಿಸಲಾಗಿದೆ. ಆದರೆ ಒಂದರಿಂದ ಏಳನೇ ತರಗತಿವರೆಗೆ ನೇರ ಆನ್‍ಲೈನ್ ತರಗತಿಗಳು ಅಗತ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ.