HEALTH TIPS

ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೆ ತರಲಾಗುವುದು; ಸಮಗ್ರ ಅಭಿವೃದ್ಧಿ ಲಕ್ಷ್ಯ: ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಮುಖ್ಯಮಂತ್ರಿ

             ತಿರುವನಂತಪುರ: ರಾಜ್ಯದ ಆಡಳಿತವನ್ನು ಮುಂದುವರಿಸುವುದು ಹೊಸ ಆರಂಭ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಎರಡನೇ ಬಾರಿ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಕಳೆದ ವರ್ಷ ಕೇರಳಕ್ಕೆ ಎದುರಾದ ಎಲ್ಲಾ ಬಿಕ್ಕಟ್ಟುಗಳನ್ನು ನೇರವಾಗಿ ಎದುರಿಸಲು ಸಾಧ್ಯವಾದುದು ದೂರದೃಷ್ಟಿಯ ಸಂಕೇತವಾಗಿದೆ. ಇನ್ನದು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಹೊಸ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ತರಲಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು.

            ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ತೀವ್ರ ಬಡತನವನ್ನು ನಿರ್ಮೂಲನೆ ಮಾಡುವ ಗುರಿ ಇರಿಸಲಾಗಿದೆ. ಬಡತನದಲ್ಲಿರುವ  ಪ್ರತಿಯೊಂದು ಕುಟುಂಬವನ್ನು ಗುರುತಿಸಿ ಬಡತನ ರೇಖೆಗಿಂತ ಮೇಲಕ್ಕೆತ್ತಲಾಗುವುದು. ಮುಂದಿನ 25 ವರ್ಷಗಳಲ್ಲಿ ಕೇರಳದ ಜೀವನ ಮಟ್ಟವನ್ನು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿ ಮಾಡುವುದು ಎಡರಂಗ ಸರ್ಕಾರದ ಲಕ್ಷ್ಯವಾಗಿದೆ. ಯಾರನ್ನೂ ಹೊರಗಿಡದ ಅಭಿವೃದ್ಧಿ ದೃಷ್ಟಿಯನ್ನು ಎತ್ತಿಹಿಡಿಯುತ್ತದೆ ಎಂದರು.

                ಕೃಷಿ ಕ್ಷೇತ್ರದಲ್ಲಿ ಪ್ರತಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಲಾಗುವುದು. ಕೃಷಿ ಮನೆಗಳನ್ನು ಸ್ಮಾರ್ಟ್ ಫಾರ್ಮ್ ಹೌಸ್‍ಗಳಾಗಿ ಪರಿವರ್ತಿಸಲಾಗುವುದು. ಅರಣ್ಯ ಭೂಮಿಯ ಗಡಿಯನ್ನು ಗುರುತಿಸಲು ಯೋಜನೆಯು ಪ್ರಾರಂಭಿಸಲಾಗುವುದು.  2025 ರ ವೇಳೆಗೆ ಹಾಲು ಉತ್ಪಾದನೆಯು ಸ್ವಾವಲಂಬಿಯಾಗಲಿದೆ. ಮಳೆನೀರನ್ನು ಸಮುದ್ರ ಸೇರದಂತೆ ಸಂಗ್ರಹಿಸಲು ದೊಡ್ಡ ಜಲಾಶಯಗಳನ್ನು ಸಿದ್ಧಪಡಿಸಲಾಗುತ್ತದೆ. ಬೇಸಿಗೆಯಲ್ಲಿ ನೀರಿನ ಲಭ್ಯತೆಯೂ ಖಚಿತವಾಗಲಿದೆ ಎಂದರು.


                ಐಟಿ ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಮಾರ್ಗದರ್ಶನ ನೀಡಲು ಸಮಗ್ರ ಜ್ಞಾನ ಸಂಪನ್ನರಾದ ವೃತ್ತಿಪರರಿಂದ  ಆರು ತಿಂಗಳಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತದೆ. ಕೇರಳದ ಶೈಕ್ಷಣಿಕ ಸಂಸ್ಥೆಗಳು ದೇಶದ ಒಳಗೆ ಮತ್ತು ಹೊರಗಿನ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಹಕರಿಸಲಿವೆ. ಅಂತಹ ರಾಷ್ಟ್ರಮಟ್ಟದ ಸ್ಥಾನಗಳಿಗೆ ಪರ್ಯಾಯಗಳನ್ನು ಮುಂದಿಡಲಾಗುವುದು. ಬೋಧನೆ, ಸಂಶೋಧನೆ ಮತ್ತು ವಿದ್ಯಾರ್ಥಿ ವಿನಿಮಯಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿನಿಮಯ ಮಾಡಿಕೊಳ್ಳಲಾಗುವುದು. ಆನ್‍ಲೈನ್ ಕೋರ್ಸ್‍ಗಳನ್ನು ಅಭಿವೃದ್ಧಿಪಡಿಸಲು ಅಂತರ್ ವಿಶ್ವವಿದ್ಯಾಲಯ ತಂಡಗಳಿಗೆ ಕೆಲಸ ನೀಡಲಾಗುವುದು. ವಿವಿಧ ಇಲಾಖೆಗಳ ತಂಡ ರಚಿಸಲಾಗುವುದು. ಗ್ರಂಥಾಲಯಗಳನ್ನು ಸಹ ಸ್ಥಾಪಿಸಲಾಗುವುದು ಎಂದವರು ತಿಳಿಸಿದರು.


               ಮಹಿಳೆಯರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸೂಕ್ತ ಉದ್ಯೋಗದೊಂದಿಗೆ ಸಂಪರ್ಕಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಹೊಸ ಅವಕಾಶಗಳು ಹೊರಹೊಮ್ಮುತ್ತಿರುವ ಪ್ರದೇಶಗಳಲ್ಲಿ ಮಹಿಳೆಯರು, ಯುವಕರು ಮತ್ತು ಪರಿಶಿಷ್ಟ ಜಾತಿಗಳ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು. ಉದ್ಯೋಗ ಸಂಬಂಧಿತ ತರಬೇತಿಯ ಪ್ರವೇಶವನ್ನು ಹೆಚ್ಚಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ತ್ಯಾಜ್ಯ ಮುಕ್ತ ಕೇರಳವನ್ನು ಜಾರಿಗೆ ತರಲಾಗುವುದು. ಸಾಮಾನ್ಯ ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. 


               ಸರ್ಕಾರಿ ಸೇವೆಗಳು ಜನರಿಗೆ ತಲಪಿಸಲು ಕ್ರಮ ಕೈಗೊಳ್ಳಲಾಗುವುದು. ಇದನ್ನು ಆನ್‍ಲೈನ್‍ನಲ್ಲಿ ಜಾರಿಗೆ ತರಲಾಗುವುದು. ಈ ಯೋಜನೆ ಅಕ್ಟೋಬರ್ 2 ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ ವಿಶೇಷ ಶಾಸನ ತರಲಾಗುವುದು. 24 ಮತ್ತು 25 ರಂದು ವಿಧಾನಸಭೆ ಅಧಿವೇಶನ ನಡೆಸಲು ಶಿಫಾರಸು ಮಾಡುವುದಾಗಿ ಪಿಣರಾಯಿ ವಿಜಯನ್ ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries