ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅಪರಾಧ ವಿಭಾಗದ ವಶದಲ್ಲಿದ್ದಾರೆ. ಅಪರಾಧ ಶಾಖೆಯ ಬಂಧನದಲ್ಲಿ ಹೀಗಿರುವರೆಂಬ ಕುತೂಹಲ ಸಹಜ. ಒಂದೇ ಮಾತು, ಆರಾಮದಲ್ಲಿರುವರು! ಏರ್ ಇಂಡಿಯಾ ಅಧಿಕಾರಿಯೊಬ್ಬರ ವಿರುದ್ಧ ಸುಳ್ಳು ಕಿರುಕುಳ ದೂರು ದಾಖಲಿಸಿದ ಪ್ರಕರಣದಲ್ಲಿ ಸ್ವಾಪ್ನಾ ಅವರನ್ನು ಅಟ್ಟಕ್ಕುಳಂಗರ ಸಬ್À ಜೈಲಿನಿಂದ ಅಪರಾಧ ವಿಭಾಗವು ಒಂಬತ್ತು ದಿನಗಳ ಹಿಂದೆ ವಶಕ್ಕೆ ತೆಗೆದುಕೊಂಡಿತ್ತು.
ಕೋಣೆಯಲ್ಲಿ ಮಲಗಲು ಮತ್ತು ವಿಶ್ರಾಂತಿ ಪಡೆಯಲು ಎಸಿ ಸೌಲಭ್ಯವಿದೆ. ಇದು ಹಾಸಿಗೆಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. ಇಬ್ಬರು ಮಹಿಳಾ ಪೋಲೀಸರು ಕಾವಲು ಕಾಯುತ್ತಿದ್ದಾರೆ.ಸ್ವಪ್ನಾಳ ತಿಂಡಿ ತೀರ್ಥಗಳಿಗೆ ಹೋಟೆಲ್‍ಗಳಿಂದ ಅಚ್ಚುಮೆಚ್ಚಿನ ಆಹಾರ ರವಾನೆಯಾಗುತ್ತಿದೆ. ಸಂಜೆ 4 ಗಂಟೆಯ ಮೊದಲು ಆಹಾರವನ್ನು ಖರೀದಿಸಿ ಸೆಲ್ ಗೆ ತೆರಳುತ್ತಾಳೆ.ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಎಸಿ ಸೌಲಭ್ಯವಿರುವ ಕೋಣೆಯಲ್ಲಿದೆ. ಸ್ವಪ್ನಾಳನ್ನು ಸಾಕ್ಷಿಗಾಗಿ ವಿವಿಧ ಸ್ಥಳಗಳಿಗೆ ಕರೆದೊಯ್ಯಬೇಕಾಗಿದೆ ಎಂದು ಅಪರಾಧ ವಿಭಾಗವು ಕಸ್ಟಡಿ ಅರ್ಜಿಯಲ್ಲಿ ತಿಳಿಸಿತ್ತು. ಆದರೆ ತನಿಖಾ ತಂಡವು ಕೇವಲ ಎರಡು ದಿನಗಳ ಬಳಿಕ ಸಾಕ್ಷಿ ಸಂಗ್ರಹಕ್ಕೆ ಸ್ವಪ್ನಾಳೊಂದಿಗೆ ಹೊರಟಿದೆ ಎಂದು ವರದಿಗಳು ತಿಳಿಸಿವೆ.
ಸ್ವಪ್ನಾ ಏರ್ ಇಂಡಿಯಾ ಉದ್ಯೋಗಿಯಾಗಿದ್ದಾಗ, ತಮ್ಮ ಸಹೋದ್ಯೋಗಿ ಎಲ್.ಎಸ್. ಸಿಬು ವಿರುದ್ಧ ನಕಲಿ ಕಿರುಕುಳ ದೂರು ನೀಡಿದ್ದರು. ಸ್ವಪ್ನಾ ಪ್ರಕರಣದ ಎರಡನೇ ಆರೋಪಿ. ಏತನ್ಮಧ್ಯೆ, ಸಪ್ನಾಳ ಕಸ್ಟಡಿ ಶನಿವಾರ ಕೊನೆಗೊಂಡಿದೆ.