ತಿರುವನಂತಪುರ: ಬಾಲಗೋಕುಲ ಸಮಿತಿಗಳು ಮನೆಯಂಗಳದಲ್ಲಿ ತುಳಸಿ ಬೆಳೆಸುವ ವಿನೂತನ ಯೋಜನೆಯ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಿದೆ. ಬಾಲಗೋಕುಲ ರಾಜ್ಯ ಕಾರ್ಯಕಾರಿ ಸಮಿತಿ 'ಅಂಗಳ ತುಳಸಿ' ಎಂಬ ರಾಜ್ಯವ್ಯಾಪಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ. ಔಷಧೀಯ ಸಸ್ಯಗಳು ಪ್ರಕೃತಿಯಿಂದ ಮರೆಯಾಗದಂತೆ ಸಂರಕ್ಷಿಸುವ ಲಕ್ಷ್ಯದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತುಳಸಿ ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗುವುದು ಇದರ ಉದ್ದೇಶ. ತುಳಸಿ ವನ ಕೇರಳದ ಸಾಂಪ್ರದಾಯಿಕ ಭೂದೃಶ್ಯಗಳಲ್ಲಿ ಒಂದಾಗಿದೆ.
ಮಹಾಮಾರಿ ಸೋಂಕು ವ್ಯಾಪಕಗೊಂಡು ಸಂಕಷ್ಟಕ್ಕೆ ತಳ್ಳಿರುವ ಈ ಸಂದರ್ಭ, ಆರೋಗ್ಯ ಮತ್ತು ಪೂಜಾದಿಗಳಿಗೆ ಅಗತ್ಯವಾದ ತುಳಸೀ ಗಿಡಗಳನ್ನು ವ್ಯಾಪಕವಾಗಿ ನೆಡಲು ಯೋಜಿಸಲಾಗಿದೆ. ಅದಕ್ಕಾಗಿಯೇ 'ಅಂಗಳ ತುಲಸಿ' ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಬಾಲಗೋಕುಲ ಸಮಿತಿಯ ಹೊಸ ಯೋಜನೆಯು ಔಷಧೀಯ ಮತ್ತು ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪ್ರಚಾರ ಮಾಡಲು ಹಾಗೂ ದೈನಂದಿನ ಮತ್ತು ವಿಶೇಷ ದಿನಗಳ ಶುಭಾಶಯಗಳನ್ನು ತುಳಸಿ ಸಸಿಯ ಮೂಲಕ ಹಂಚುವ ಅಭ್ಯಾಸವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಅಷ್ಟಮಿ,ರೋಹಿಣಿ ಹಬ್ಬದಂದು ಕಣ್ಣನಿಗೆ ತುಳಸೀ ಹಾರಗಳ ಸಮೂಹವನ್ನೇ ಸಮರ್ಪಿಸಲು ಅಣಿಗೊಳ್ಳುವಂತೆ ಅಂಗಳ ಪೂರ್ತಿ ತುಳಸಿ ಸಸಿ ನೆಡಬೇಕೆಂದು ಪ್ರಮುಖರು ತಿಳಿಸಿದ್ದಾರೆ. ಬಾಲಮಿತ್ರಂನ ಉನ್ನತ ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಆನ್‍ಲೈನ್ ಮಾಧ್ಯಮಗಳ ಮೂಲಕ ಬಾಲಗೋಕುಲ ಜಿಲ್ಲಾ ವಾರ್ಷಿಕ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲು ರಾಜ್ಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.