HEALTH TIPS

ಕೊರೋನಾ ಲಸಿಕೆ ಅಭಿಯಾನ ಕಾರ್ಯತಂತ್ರ ಸರಿಯಾಗಿದೆ; ನ್ಯಾಯಾಂಗದ ಅತಿಯಾದ ಹಸ್ತಕ್ಷೇಪದಿಂದ ಅನಿರೀಕ್ಷಿತ ಪರಿಣಾಮ: 'ಸುಪ್ರೀಂ'ಗೆ ಕೇಂದ್ರ

        ನವದೆಹಲಿ: ಕೋವಿಡ್-19 ವಿರುದ್ಧ ಸೆಣಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಕೋವಿಡ್-19 ಲಸಿಕೆ ಅಭಿಯಾನವು ನ್ಯಾಯಸಮ್ಮತ, ತಾರತಮ್ಯರಹಿತ ವಿಧಾನದಲ್ಲಿದ್ದು, ಅತಿಯಾದ ನ್ಯಾಯಾಂಗ ಹಸ್ತಕ್ಷೇಪವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.


          ಕೊರೋನಾ ಲಸಿಕೆ ಅಭಿಯಾನದ ಬಗ್ಗೆ ಸುಪ್ರೀಂ ಕೋರ್ಟ್ ಎತ್ತಿರುವ ಅಂಶಗಳಿಗೆ ಪ್ರತಿಕ್ರಿಯೆ ನೀಡಿ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಕೇಂದ್ರ ಸರ್ಕಾರ, ಈಗಿನ ಕೊರೋನಾ ಪರಿಸ್ಥಿತಿಯಲ್ಲಿ ಒಂದೇ ಹಂತದಲ್ಲಿ ದೇಶಾದ್ಯಂತ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಕೊರೋನಾ ಲಸಿಕೆ ಡೋಸ್ ಗಳ ಪೂರೈಕೆಯಲ್ಲಿ ವ್ಯತ್ಯಯವಿದೆ, ಅದರ ಲಭ್ಯತೆ ಕೂಡ ಕಾರಣವಾಗಿದೆ ಎಂದು ಹೇಳಿದೆ.

        ಕೋವಿಡ್ ಸಾಂಕ್ರಾಮಿಕವನ್ನು ಹತ್ತಿಕ್ಕಲು ಅಗತ್ಯ ಸೇವೆ, ವೈದ್ಯಕೀಯ ಸೌಲಭ್ಯಗಳ ಪೂರೈಕೆ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು. ದೇಶದಲ್ಲಿ ಈಗ ಮತ್ತು ಸದ್ಯದ ಭವಿಷ್ಯದಲ್ಲಿ ಆಕ್ಸಿಜನ್ ಪೂರೈಕೆಯ ಅಂದಾಜು ಪೂರೈಕೆ, ತೀವ್ರ ತೊಂದರೆಯಲ್ಲಿರುವ ರಾಜ್ಯಗಳಿಗೆ ಹೇಗೆ ಆಕ್ಸಿಜನ್ ಹಂಚಿಕೆ ಮಾಡುತ್ತದೆ ಮತ್ತು ನಿರಂತರವಾಗಿ ಪೂರೈಕೆಯಾಗಲು ಕಾರ್ಯತಂತ್ರವನ್ನು ಹೇಗೆ ನಿಗಾವಹಿಸುತ್ತದೆ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು.

ಲಸಿಕೆ ನೀತಿಯು ಸಂವಿಧಾನದ ವಿಧಿ 14 ಮತ್ತು ಸಂವಿಧಾನ ವಿಧಿ 21 ರ ಆದೇಶಕ್ಕೆ ಅನುಗುಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಹಲವಾರು ಸುತ್ತಿನ ಸಮಾಲೋಚನೆ ಮತ್ತು ತಜ್ಞರೊಂದಿಗೆ ಚರ್ಚಿಸಿದ ನಂತರ ಇದನ್ನು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

      ರಾಜ್ಯ ಸರ್ಕಾರಗಳು ಮತ್ತು ಲಸಿಕೆ ತಯಾರಕರು ಈ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಉನ್ನತ ನ್ಯಾಯಾಲಯದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ, ಯಾವುದೇ ಅತಿಯಾದ ನ್ಯಾಯಾಂಗ ಹಸ್ತಕ್ಷೇಪವು ಯಾವುದೇ ತಜ್ಞರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಅನುಪಸ್ಥಿತಿಯಲ್ಲಿ ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು, ವೈದ್ಯರು, ವಿಜ್ಞಾನಿಗಳು, ತಜ್ಞರು ಮತ್ತು ಕಾರ್ಯನಿರ್ವಾಹಕರು ಇಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವಾಗ ನವೀನ ಪರಿಹಾರಗಳನ್ನು ಕಂಡುಹಿಡಿಯಲು ಬಹಳ ಕಡಿಮೆ ಅವಕಾಶವಿರುತ್ತದೆ ಎಂದು ಕೇಂದ್ರ ಸರ್ಕಾರ ತನ್ನ 200 ಪುಟಗಳ ಅಫಿಡವಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಗೆ ವಿವರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries