ಕಾಸರಗೋಡು: ಕ್ಯಾಂಪ್ಕೋ ವತಿಯಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಸೋಮವಾರದಿಂದ ಪುನರಾರಂಭಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ತನ್ನ ಎಲ್ಲ ಶಾಖೆಗಳಲ್ಲೂ ಕೃಷಿ ಉತ್ಪನ್ನ ಖರೀದಿ ಸ್ಥಗಿತಗೊಳಿಸಿತ್ತು.
ಪ್ರತಿದಿನ ಗರಿಷ್ಠ25 ಸದಸ್ಯರಿಂದ(ಉಪಶಾಖೆಗಳಲ್ಲಿ ವಾರದಲ್ಲಿಒಂದುದಿನ ಗರಿಷ್ಠ15ಸದಸ್ಯರಿಂದ)ಸರದಿಯಪ್ರಕಾರ ತಲಾ ಗರಿಷ್ಠ ಒಂದುಕ್ವಿಂಟಾಲ್ ಅಡಕೆಯನ್ನುಖರೀದಿಸಲಿದೆ. ಕೊಕ್ಕೊ ಖರೀದಿಗೆ ಯಾವುದೇನಿಬರ್ಂಧಗಳನ್ನು ಹಾಕಲಾಗಿಲ್ಲ. ಆದರೆ ಸದ್ಯ ಕಾಳುಮೆಣಸಿನ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ. ಆಯಾ ಪ್ರದೇಶದ ಲಾಕ್‍ಡೌನ್ ನಿಬಂಧನೆ ಅನ್ವಯ ಸೋಮವಾರದಿಂದ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಖರೀದಿನಡೆಯಲಿದ್ದು, ಸದಸ್ಯರು ಸಹಕರಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಮತ್ತು ವ್ಯವಸ್ಥಾಪಕನಿರ್ದೇಶಕಎ ಚ್.ಎಮ್.ಕೃಷ್ಣಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.