HEALTH TIPS

ಕೋವಿಡ್‌: ಚೇತರಿಕೆ ಬಳಿಕ ಶ್ವಾಸಕೋಶದ ಸಮಸ್ಯೆ?

             ನವದೆಹಲಿ: ಕೋವಿಡ್ ಪೀಡಿತರು ಆಸ್ಪತ್ರೆಯಿಂದ ಬಿಡುಗಡೆಯಾದ ಮೂರು ತಿಂಗಳ ನಂತರ ಅವರಲ್ಲಿ, ಶ್ವಾಸಕೋಶದದಲ್ಲಿ ಗಂಭೀರ ಸ್ವರೂಪದ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

           ಈ ಸಮಸ್ಯೆಯನ್ನು ಸಾಮಾನ್ಯ ಸಿ.ಟಿ ಸ್ಕ್ಯಾನ್ ಮೂಲಕ ಗುರುತಿಸಲಾಗುತ್ತಿಲ್ಲ. ರೋಗಿಗಳಿಗೆ ಸಾಮಾನ್ಯವಾಗಿ ನಿಮ್ಮ ಶ್ವಾಸಕೋಶದ ಕಾರ್ಯನಿರ್ವಹಣೆ ಸಹಜ ಸ್ಥಿತಿಯಲ್ಲಿದೆ ಎಂದೇ ತಿಳಿಸಲಾಗುತ್ತಿದೆ ಎಂದು ಬ್ರಿಟನ್‌ನ ಶೆಫೀಲ್ಡ್‌ ಮತ್ತು ಆಕ್ಸಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಈ ಕುರಿತ ಅಧ್ಯಯನ ವರದಿಯನ್ನು ರೇಡಿಯಾಲಜಿ ಕುರಿತ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅದರ ಪ್ರಕಾರ, ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾಗದವರು ಹಾಗೂ ದೀರ್ಘಾವಧಿಯ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರೂ ಶ್ವಾಸಕೋಶದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.

            ಆದರೆ, ಈ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು ವಿಸ್ತೃತವಾದ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 'ಈಗಿನ ಅಧ್ಯಯನದಿಂದ ಹೊರಬಂದಿರುವ ಅಂಶಗಳು ಆಸಕ್ತಿಕರವಾಗಿವೆ' ಎಂದು ಶೆಫೀಲ್ಡ್ ಯೂನಿವರ್ಸಿಟಿಯ ಪ್ರೊಫೆಸರ್‌ ಜಿಮ್‌ ವೈಲ್ಡ್‌ ಅವರು ಪ್ರತಿಕ್ರಿಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries