ತಿರುವನಂತಪುರ: ಟೌಕ್ಟೆ ಚಂಡಮಾರುತದ ಸಂಕಷ್ಟ ಮುಗಿಯುವ ಮುನ್ನ ಇದೀಗ ‘ಯಾಸ್’ ಬರುತ್ತಿದೆ. ಮೇ.23 ರಂದು ಹವಾಮಾನ ತಜ್ಞರು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡವಾಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಇದು ಮೇ.24 ರಂದು ತೀವ್ರವಾದ ಕಡಿಮೆ ಒತ್ತಡವಾಗಲಿದೆ. ಬಳಿಕ ಚಂಡಮಾರುತವಾಗಿ ಬದಲಾದಾಗ 'ಯಾಸ್' ಎಂದೂ ಕರೆಯಲ್ಪಡುತ್ತದೆ. ಯಾಸ್ ರೂಪುಗೊಂಡರೆ, ದಕ್ಷಿಣ ಕೇರಳದಲ್ಲಿ 25 ರಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.