ತಿರುವನಂತಪುರ: ಮುಂದಿನ ಮೂರು ವಾರಗಳು ರಾಜ್ಯಕ್ಕೆ ನಿರ್ಣಾಯಕ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿರುವ ರಾಜ್ಯಗಳಲ್ಲಿ ಕೇರಳ ಪ್ರಸ್ತುತ ಒಂದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿಎಂ ಹೇಳಿದರು.
ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಭಾನುವಾರ ಶುಷ್ಕ ದಿನವಾಗಿ ಆಚರಿಸಲು ಎಲ್ಲರೂ ಸಿದ್ಧರಾಗಿರಬೇಕು. ಪ್ರತಿಯೊಬ್ಬರೂ ಇದನ್ನು ತಮ್ಮ ಜವಾಬ್ದಾರಿ ಎಂಬಂತೆ ನಿರ್ವಹಿಸಬೇಕು. ಈ ಬಗ್ಗೆ ರಾಜಿ ಮಾಡಿಕೊಳ್ಳದೆ ಎಲ್ಲರೂ ಕರ್ತವ್ಯ ತತ್ಪರತೆಗೆ ಸಿದ್ಧರಾಗಿರಬೇಕು. ಕೊರೋನಾ ತಡೆಗಟ್ಟುವ ಚಟುವಟಿಕೆಗಳಿಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ನಟ ಮೋಹನ್ ಲಾಲ್ ಅವರ ವಿಶ್ವಶಾoತಿ ಪ್ರತಿಷ್ಠಾನವು 200 ಹಾಸಿಗೆಗಳನ್ನು ಒದಗಿಸಿದೆ ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.