ತಿರುವನಂತಪುರ: ಕೊರೋನಾ ರೋಗಿಯೊಬ್ಬರು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೇಲ್ಚಾವಣಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. 60 ವರ್ಷದ ರೋಗಿಯೊಬ್ಬರು ಮೇಲಂತಸ್ತಿನಿಂದ ಕೆಳಗೆ ಹಾರಿ ಬೆದರಿಕೆ ಹಾಕಿದ್ದು ನಂತರ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ರೋಗಿಯನ್ನು ರಕ್ಷಿಸಿದರು.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರು ಹೇಳಿರುವಂತೆ ಆ ವ್ಯಕ್ತಿ ಮನೆಗೆ ಹೋಗಲು ಆಸ್ಪತ್ರೆಯ ಮೇಲಿನಿಂದ ಜಿಗಿಯಲು ಪ್ರಯತ್ನಿಸಿದ. ತಾಯಿ ಸತ್ತುಹೋದರೆಂದು ಕನಸು ಕಂಡಿರುವುದಾಗಿ ಆತ ಭಯಭೀತರಾಗಿ ಮನೆಗೆ ಹೋಗಲು ಪ್ರಯತ್ನಿಸಿದ. ಅವನು ಎರಡನೇ ಮಹಡಿಯ ಮೇಲಿನಿಂದ ಹಾರಿ ಕೆಳ ಅಂತಸ್ತಿಗೆ ತಲುಪಿದನು. ಆದರೆ ಈ ವೇಳೆ ಸಿಕ್ಕಿಹಾಕಿಕೊಂಡು ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬಳಿಕ ಆತನನ್ನು ಮನವೊಲಿಸಿ ಕೆಳಗಿಳಿಸಲಾಯಿತು.ತಾಯಿ ಮೃತಪಟ್ಟರೆಂದು ಕನಸು: ವೈದ್ಯಕೀಯ ಕಾಲೇಜಿನ ಮೇಲ್ಭಾಗದಿಂದ ಹಾರಿ ತಪ್ಪಿಸಿಕೊಳ್ಳಲು ನಾಟಕವಾಡಿದ ಕೊರೊನಾ ಸೋಂಕಿತ
0
ಮೇ 21, 2021
Tags