ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಹರಡುವಿಕೆಯ ಹೆಚ್ಚಳದಿಂದಾಗಿ ಆರೋಗ್ಯ ಇಲಾಖೆಯ ರಾಜ್ಯ ಕೋವಿಡ್ -19 ಕಾಲ್ ಸೆಂಟರ್ ನ್ನು ಮತ್ತೆ ಪುನಃರಾರಂಭಿಸಿದೆ. ಸಂಖ್ಯೆಗಳು 0471 2309250, 2309251, 2309252, 2309253, 2309254 ಮತ್ತು 2309255 ಆಗಿವೆ.
ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿರುವಂತೆ ಕೊರೋನಾ ಸಂಬಂಧಿತ ಅನುಮಾನಗಳನ್ನು ನಿವಾರಿಸಲು ಮತ್ತು ಸಾರ್ವಜನಿಕರಿಗೆ ಪ್ರಮುಖ ಮಾಹಿತಿಯನ್ನು ರವಾನಿಸಲು ಕಾಲ್ ಸೆಂಟರ್ ನ ಸೇವೆಗಳನ್ನು ಬಳಸಿಕೊಳ್ಳಲಾಗುತ್ತದೆ. ಕಾಲ್ ಸೆಂಟರ್ ಗೆ ಮಾಡುವ ಕರೆಗಳಿಂದ ಅನುಮಾನ, ಸಮಸ್ಯೆಗಳಿಗೆ ಪರಿಹಾರ ಲಭಿಸಲಿವೆ. ಮತ್ತು ಕರೆ ಮಾಡಿದವರ ಪ್ರಮುಖ ಮಾಹಿತಿಯನ್ನು ವಿವಿಧ ಜಿಲ್ಲೆಗಳು ಮತ್ತು ಇಲಾಖೆಗಳಿಗೆ ಕ್ರಮಗಳ ನಿರ್ವಹಣೆಗೆ ಕಳುಹಿಸಲಾಗುತ್ತದೆ.
ಕೊರೋನಾಗೆ ಸಂಬಂಧಿಸಿದ ಸಾರ್ವಜನಿಕ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗೆ ತರಬೇತಿ ನೀಡಿ ನೇಮಕ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ನಿನ್ನೆ ರಾಜ್ಯದಲ್ಲಿ 42,464 ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಲಾಗಿತ್ತು. ಸತತ ಎರಡನೇ ದಿನ ರಾಜ್ಯದಲ್ಲಿ ರೋಗಿಗಳ ಸಂಖ್ಯೆ 40,000 ದಾಟಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 8,18,411 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,88,529 ಮಂದಿ ಜನರು ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 29,882 ಮಂದಿ ಜನರು ಆಸ್ಪತ್ರೆಗಳಲ್ಲಿದ್ದಾರೆ.