HEALTH TIPS

ಕೋವಿಡ್ ಮುಕ್ತನಾದರೂ ಆಸ್ಪತ್ರೆಯಲ್ಲೇ ಉಳಿದ ವೃದ್ಧ: ಪುನರ್ವಸತಿಗೆ ಮಾನವಹಕ್ಕು ಆಯೋಗ ಸೂಚನೆ

             ಕಾಸರಗೋಡು: ಕೋವಿಡ್ ಬಾಧಿಸಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೋವಿಡ್ ಸೆಂಟರಲ್ಲಿ ಕಳೆಯುತ್ತಿರುವ ವೃದ್ಧರೊಬ್ಬರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಮಾನವಹಕ್ಕು ಆಯೋಗ ನಿರ್ದೇಶಿಸಿದೆ. ಈ ಬಗ್ಗೆ ಆಯೋಗ ಸದಸ್ಯ ಬೈಜುನಾಥ್ ಅವರು ಕಾಸರಗೋಡು ಸಾಮಾಜಿಕ ನೀತಿ ಇಲಾಖೆ ಅಧಿಕಾರಿಗೆ ಆದೇಶ  ನೀಡಿದ್ದಾರೆ.

         ಈ ವೃದ್ಧರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಲಭಿಸಿದ ಮಾಹಿತಿ ಆಧರಿಸಿ ಆಯೋಗ ಈ ಆದೇಶ ನೀಡಿದೆ. ಕೆಲವು ದಿವಸಗಳ ಹಿಂದೆ ಈ ವ್ಯಕ್ತಿಯನ್ನು ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಕೋವಿಡ್ ನೆಗೆಟಿವ್ ಆದರೂ, ಇವರನ್ನು ಯಾರೂ ಕರೆದೊಯ್ಯಲು ಆಗಮಿಸಿರಲಿಲ್ಲ. 

ನೆನಪುಶಕ್ತಿ ಕಡಿಮೆಯಿರುವ ಈ ವ್ಯಕ್ತಿ ತನ್ನ ವಾಸ್ತವ್ಯದ ಜಾಗವನ್ನು ಸ್ಪಷ್ಟವಾಗಿ ತಿಳಿಸದಿರುವುದರಿಂದ ಅಧಿಕಾರಿಗಳೂ ಪರದಾಡುವಂತಾಗಿದೆ. ಪ್ರಸಕ್ತ ವೃದ್ಧ ವ್ಯಕ್ತಿಯನ್ನು ಕೋವಿಡ್ ರೋಗಿಗಳ ಜತೆಯಲ್ಲಿರಿಸಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಆಯೋಗ ಸಾಮಾಜಿಕ ನೀತಿ ಇಲಾಖೆಗೆ ಸೂಚಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries