ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯಿತಿನ ಎಂಟನೆಯ ವಾರ್ಡಿನ ಜನ ಜಾಗೃತಿ ಸಮಿತಿಯ ಸಭೆಯು ಸೀತಾಂಗೋಳಿ ಅಂಗನವಾಡಿಯಲ್ಲಿ ಜರಗಿತು. ಹೆಲ್ತ್ ಇನ್ಸ್ ಪೆಕ್ಟರ್ ಕೆ. ಎಂ .ಮೋಹನನ್ ಕೊರೋನಾ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು. ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಂತ ಪಾಟಾಳಿ ಮಾಜಿ ಸದಸ್ಯ ಎ ಕೆ ಮುಹಮ್ಮದ್ ಕುಂಞÂ ಮಾಸ್ತರ್, ಯೋಜನೆಯ ಶಿಕ್ಷಕರಾದ ಸೂರ್ಯ ಭಟ್ ಎಡನೀರು, ಜ್ಯೋತಿ, ಸ್ವಾತಿ, ಮಿನಿ, ವಿಜಯಲಕ್ಷ್ಮಿ, ಕವಿತಾ, ಪ್ರೇಮಾ, ಆಶಾ ವರ್ಕರ್ ಸುರೇಖಾ, ಚಂದ್ರನ್, ಸಮೀಮ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ವಾರ್ಡ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ವಿವಿಧ ಸಮಿತಿಗಳನ್ನು ರೂಪೀಕರಿಸಲು ತೀರ್ಮಾನ ಕೈಗೊಳ್ಳಲಾಯಿತು. ವಾರ್ಡಿನ ಎಲ್ಲಾ ಮನೆಗಳನ್ನು ಕೇಂದ್ರೀಕರಿಸಿ ಅಲ್ಲಲ್ಲಿ ವಿವಿಧ ವಿಭಾಗದ ಜನರ ಸಹಯೋಗದೊಂದಿಗೆ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಯುವ ಸಂಘಟನೆಗಳ ಸಹಯೋಗದೊಂದಿಗೆ ಕೊರೋನಾ ಮುಕ್ತ ವಾರ್ಡ ಆಗಿ ಪರಿವರ್ತಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳÀ್ಳಲಾಯಿತು.