HEALTH TIPS

"ಅವರು ಎಲ್ಲಿಯೋ ಎಡವಿದ್ದಾರೆ": ಮೋದಿ ಸರಕಾರದ ಕೋವಿಡ್ ನಿರ್ವಹಣೆಯನ್ನು ಟೀಕಿಸಿದ 'ಅಭಿಮಾನಿ' ಅನುಪಮ್ ಖೇರ್

         ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅಭಿಮಾನಿಯಾಗಿರುವ ಹಾಗೂ ಈ ಹಿಂದೆ ಪ್ರಧಾನಿಯನ್ನು ಹಲವು ಬಾರಿ ಹೊಗಳಿರುವ ಹಿರಿಯ ನಟ ಅನುಪಮ್ ಖೇರ್, ಅಚ್ಚರಿಯ ಬೆಳವಣಿಗೆಯಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ಕೇಂದ್ರ ಸರಕಾರ ನಿರ್ವಹಿಸಿರುವ ರೀತಿಯನ್ನು ಟೀಕಿಸಿದ್ದಾರೆ.

  "ಈಗ ಆಗಿರುವುದಕ್ಕೆ ಕೇಂದ್ರ ಸರಕಾರವನ್ನು ಹೊಣೆಯಾಗಿಸುವುದು ಮುಖ್ಯ. ಎಲ್ಲಿಯೋ ಅವರು ಎಡವಿದ್ದಾರೆ. ತಮ್ಮ ಇಮೇಜ್ ವೃದ್ಧಿಸುವುದಕ್ಕಿಂತ ಜೀವನದಲ್ಲಿ ಹೆಚ್ಚಿನದನ್ನು ಮಾಡಬೇಕಿದೆ ಎಂದು ಅವರು ಅರ್ಥೈಸಬೇಕಾದ ಸಮಯ ಪ್ರಾಯಶಃ ಬಂದಿದೆ" ಎಂದು ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಖೇರ್ ಹೇಳಿದ್ದಾರೆ.

      ದೇಶದ ಹಲವೆಡೆ ಕೋವಿಡ್ ಸೋಂಕಿತರ ಕುಟುಂಬಗಳು ಆಸ್ಪತ್ರೆಗಳಲ್ಲಿ ಬೆಡ್‍ಗಾಗಿ ಅಂಗಲಾಚುತ್ತಿರುವುದು, ನದಿಗಳಲ್ಲಿ ಮೃತದೇಹಗಳು ತೇಳಿ ಬರುತ್ತಿರುವ ಕುರಿತು ಖೇರ್ ಅವರ ಗಮನ ಸೆಳೆದಾಗ "ಹಲವಾರು ಪ್ರಕರಣಗಳಲ್ಲಿ ಟೀಕೆಗಳು ಸಮರ್ಥನೀಯವಾಗಿವೆ ಹಾಗೂ ಸರಕಾರ ಸಂದರ್ಭಕ್ಕೆ ಸ್ಪಂದಿಸಿ ಅವರನ್ನು ಈ ದೇಶದ ಜನರು ಯಾವ ಕೆಲಸ ಮಾಡಲು ಆರಿಸಿದ್ದರೋ ಆ ಕೆಲಸಗಳನ್ನು ಅವರು ಮಾಡಬೇಕಿದೆ" ಎಂದರು.

       "ಅಮಾನವೀಯ ವ್ಯಕ್ತಿಯೊಬ್ಬ ಮಾತ್ರ ಮೃತದೇಹಗಳು ತೇಲಿ ಬರುತ್ತಿರುವುದರಿಂದ ಯಾವುದೇ ರೀತಿಯಲ್ಲಿ ಬಾಧಿತವಾಗುವುದಿಲ್ಲ. ಆದರೆ ಇದನ್ನು ಇನ್ನೊಂದು ರಾಜಕೀಯ ಪಕ್ಷ ತನ್ನ ಲಾಭಕ್ಕಾಗಿ ಬಳಸುವುದು ಕೂಡ ತಪ್ಪು" ಎಂದು ಖೇರ್ ಹೇಳಿದರು.

        ಅಚ್ಚರಿಯೆಂದರೆ ಕೆಲವೇ ದಿನಗಳ ಹಿಂದೆ ಮೋದಿ ಸರಕಾರದ ಕೋವಿಡ್ ನಿರ್ವಹಣೆ ಕುರಿತು ಟೀಕಿಸಿ ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಮಾಡಿದ್ದ ಟ್ವೀಟ್‍ಗೆ "ಆಯೇಗಾ ತೋ ಮೋದಿ ಹೀ" ಎಂದು ಪ್ರತಿಕ್ರಿಯಿಸಿ ಖೇರ್ ಟೀಕೆಗೊಳಗಾಗಿದ್ದರು.

      ಗುಪ್ತಾ ಅವರ ಟ್ವೀಟಿಗೆ ಪ್ರತಿಕ್ರಿಯಿಸಿದ್ದ ಖೇರ್ "ಸನ್ಮಾನ್ಯ ಶೇಖರ್ ಗುಪ್ತಾ, ಇದು ಅತಿರೇಕ. ಕೊರೋನಾ ಇಡೀ ವಿಶ್ವದ ಸಮಸ್ಯೆ. ನಾವು ಇಂತಹ ಸಾಂಕ್ರಾಮಿಕವನ್ನು ಈ ಹಿಂದೆ ಯಾವತ್ತೂ ಎದುರಿಸಿರಲಿಲ್ಲ. ಸರಕಾರವನ್ನು ಟೀಕಿಸುವುದು ಮುಖ್ಯ, ಅದೇ ಸಮಯ ಇದನ್ನು ನಿಭಾಯಿಸುವುದು ಕೂಡ ನಮ್ಮ ಜವಾಬ್ದಾರಿ. ಚಿಂತಿಸಬೇಡಿ, ಆಯೇಗಾ ತೋ ಮೋದಿ ಹೀ (ಮುಂದೆಯೂ ಮೋದಿಯೇ ಆಯ್ಕೆಯಾಗುತ್ತಾರೆ) ಜೈ ಹೋ" ಎಂದು ಟ್ವೀಟ್ ಮಾಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries