ತಿರುವನಂತಪುರ: ಪ್ರತಿಷ್ಠಿತ ನೇಮಂ ಕ್ಷೇತ್ರದಲ್ಲಿ ಯಾರು ಗೆಲ್ಲಬೇಕು, ಯಾರನ್ನು ಸೋಲಿಸಬೇಕು ಎಂಬ ಬಗ್ಗೆ ಎಲ್.ಡಿ.ಎಫ್. ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸ್ಪಷ್ಟ ತಿಳುವಳಿಕೆ ಇದೆ ಎಂದು ಎನ್.ಡಿ.ಎ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದ ಕಾರಣ ನೇಮಂ ನಲ್ಲಿ ಬಿಜೆಪಿ ಸೋತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ ಮುರಲೀಧರನ್ ಅವರ ಹೇಳಿಕೆ ಬಹಳ ವಿಚಿತ್ರವಾಗಿದೆ ಎಂದು ಕುಮ್ಮನಂ ಹೇಳಿದ್ದಾರೆ.
ಈ ವಿಧಾನಸಭಾ ಚುನಾವಣೆಯಲ್ಲಿ 2019 ರ ಸಂಸತ್ ಚುನಾವಣೆಯಲ್ಲಿ ನೇಮಂ ನಲ್ಲಿ ಕಾಂಗ್ರೆಸ್ ಪಡೆದ 46,472 ಮತಗಳು (32.8%) ಈಗ 36,524 (25%) ಕ್ಕೆ ಹೇಗೆ ಕುಸಿಯಿತು ಎಂಬುದನ್ನು ಮುರಲೀಧರನ್ ವಿವರಿಸಬೇಕು. ಕಾಂಗ್ರೆಸ್ ಮತಗಳು ಎಲ್ ಡಿ ಎಫ್ ಗೆ ಹೋದಂತೆ ಎಲ್ ಡಿ ಎಫ್ ತನ್ನ ಮತದ ಪಾಲನ್ನು 33,921 (24%) ರಿಂದ 55,837 (38.2%) ಕ್ಕೆ ಹೆಚ್ಚಿಸಲು ಸಾಧ್ಯವಾಯಿತು. ಅಲ್ಪಸಂಖ್ಯಾತ ಕಾಂಗ್ರೆಸ್ ಮತಗಳನ್ನು ಎಲ್ ಡಿ ಎಫ್ ಗೆ ತಿರುಗಿಸುವ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿದೆ ಎಂದು ಕುಮ್ಮನಂ ರಾಜಶೇಖರನ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
ಎಲ್ಡಿಎಫ್ ಗೆದ್ದರೂ ಕಾಂಗ್ರೆಸ್ಸ್ ಅಂತಿಮ ಸೋಲನ್ನು ಒಪ್ಪುತ್ತಿಲ್ಲ. ಆದರೆ ಬಿಜೆಪಿಯನ್ನು ಸೋಲಿಸುವ ಕಾಂಗ್ರೆಸ್ ಇರಾದೆಯ ನಕಾರಾತ್ಮಕ ನೀತಿಯು ತಮ್ಮದೇ ಪಕ್ಷದ ವಿನಾಶಕ್ಕೆ ಕಾರಣವಾಗಿದೆ ಎಂಬುದನ್ನು ಮುರಳೀಧರನ್ ಅರ್ಥೈಸುತ್ತಿಲ್ಲ. ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದಿರುವುದೇ ಆದರೆ ಸಿಪಿಎಂ ಗೆಲುವಿನ ಜವಾಬ್ದಾರಿಯನ್ನು ಸಹ ಅವರು ತೆಗೆದುಕೊಳ್ಳಬೇಕು ಎಂದು ಕುಮ್ಮನಂ ತಿಳಿಸಿರುವರು.
ಕೇರಳದಾದ್ಯಂತ ಬಿಜೆಪಿಯನ್ನು ಸೋಲಿಸಲು ಎಲ್ ಡಿ ಎಫ್ ಮತ್ತು ಯುಡಿಎಫ್ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಬಲವಾದ ಯೋಜನೆ ಇರಿಸಿದೆ ಎಂದು ಮುರಳೀಧರನ್ ಅವರ ಬಹಿರಂಗಪಡಿಸುವಿಕೆಯಿಂದ ಸ್ಪಷ್ಟಗೊಂಡಿದೆ ಎಂದು ಕುಮ್ಮನಂ ರಾಜಶೇಖರನ್ ಹೇಳಿರುವರು.