HEALTH TIPS

ಅವಧಿಗೂ ಮುನ್ನ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ: ಹವಾಮಾನ ಇಲಾಖೆ

          ನವದೆಹಲಿ: ನೈಋತ್ಯ ಮುಂಗಾರು ಅವಧಿಗೂ ಮುನ್ನವೇ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

       ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಮಾರುತವು ಕೇರಳ ಪ್ರವೇಶಿಸುತ್ತಿದ್ದು, ಈ ಬಾರಿ ಮೇ 31ರಂದೇ ಆಗಮಿಸುವ ನಿರೀಕ್ಷೆ ಇದೆ.

       ಈ ಬಾರಿ ಮೇ 22ರಂದಲೇ ನೈಋತ್ಯ ಮುಂಗಾರು ಅಂಡಮಾನ್‌ ಪ್ರದೇಶದಲ್ಲಿ ಹಾದು ಬರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

       ಅರಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವ ನಡುವೆಯೇ ನೈಋತ್ಯ ಮಾರುತವೂ ಪ್ರಬಲಗೊಳ್ಳುತ್ತಿದೆ ಎಂದು ಇಲಾಖೆ ಹೇಳಿದೆ.

         ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಎಂದೂ ಇಲಾಖೆ ಮುನ್ಸೂಚನೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries