ಕಾಸರಗೋಡು: ಉದುಮ ಗ್ರಾಮ ಪಂಚಾಯಿತಿಯ ಎಂಟನೇ ವಾರ್ಡು ಏರೋಲ್, ಅಂಬಲತ್ತುಂಗಾಲ್ ಪ್ರದೇಶದಲ್ಲಿ ಡೆಂಘೆ ಜ್ವರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಆರೋಗ್ಯ ಕೇಂದ್ರ ವತಿಯಿಂದ ವಾರ್ಡುಮಟ್ಟದಲ್ಲಿ ಜಾಗ್ರತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ವೈದ್ಯಾಧಿಕಾರಿ ಡಾ. ಎಂ. ಮಹಮ್ಮದ್, ಗ್ರಾಪಂ ಸದಸ್ಯೆ ಎಂ. ಸಿಂಧು, ಆರೋಗ್ಯ ಕೇಂದ್ರ ಸಿಬ್ಬಂದಿ ನೇತೃತ್ವದಲ್ಲಿ ವಾರ್ಡಿನ ಮನೆಗಳಿಗೆ ಹಾಗೂ ತೋಟಗಳಿಗೆ ಸಂದರ್ಶನ ನಡೆಸಿ, ಜನರಲ್ಲಿ ಜಾಗೃತಿಮೂಡಿಸುವ ಕೆಲಸ ನಡೆಸಲಾಯಿತು. ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ನೇಮಿಸಲಾದ ನೋಡೆಲ್ ಅಧಿಕಾರಿಗಳು, ಆಶಾ, ಕುಟುಂಬಶ್ರೀ ಸದಸ್ಯೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮನೆ ವಠಾರ, ತೋಟಗಳಲ್ಲಿ ನೀರು ದಾಸ್ತಾನುಗೊಳ್ಳದಂತೆ ನೋಡಿಕೊಳ್ಳುವುದರ ಜತೆಗೆ ಕುದಿಸಿ ತಣಿಸಿದ ನೀರು, ಬಿಸಿಯಾದ ಆಹಾರ ಸೇವನೆ ಬಗ್ಗೆ ಜನರಿಗೆ ಬೋಧನೆ ನೀಡಲಾಯಿತು.