ಪೆರ್ಲ: ಕೋವಿಡ್ ನಿಗ್ರಹದ ಭಾಗವಾಗಿ ಎಣ್ಮಕಜೆ ಪಂಚಾಯತಿನಲ್ಲಿ ಡೋಮಿಸಿಲೆರಿ ಕೇರ್ ಸೆಂಟರ್ ಕಾರ್ಯರಂಭಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳ ,ವ್ಯಾಪಾರಿ ಮುಖಂಡರ,ಹೆಲ್ಪ್ ಡೆಸ್ಕ್ ತಂಡದವರ ಸಹಾಯದೊಂದಿಗೆ ಅಗತ್ಯ ಪರಿಕರಗಳೊಂದಿಗೆ ಆರಂಭಿಸಲು ಕೇಂದ್ರವನ್ನು ತೆರೆಯಲು ನಿರ್ಧರಿಸಲಾಯಿತು. ಸಮಾಜದ ವಿವಿಧ ವಲಯಗಳಿಂದ ಅಗತ್ಯವಾದ ಸಹಾಯ ಸಹಕಾರವನ್ನು ಪಡೆದು ಶುಕ್ರವಾರದಿಂದಲೇ ಕೇಂದ್ರ ತೆರೆದು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಯಿತು.