HEALTH TIPS

ಇಂದು ಚುನಾವಣಾ ಫಲಿತಾಂಶ ಪ್ರಕಟ-ಆದರೆ, ಯಾರೇ ಆಳಲಿ ಜನಸಾಮಾನ್ಯರಿಗೆ ಕೋವಿಡ್ ನಿಂದ ಮುಕ್ತಿ ನೀಡುವವರು ಮಾತ್ರ ಗದ್ದುಗೆಗೆ ಏರಬೇಕು

                   ಹೇಳಿ-ಕೇಳಿ ಕೇರಳದಲ್ಲಿ ರಾಜಕೀಯಕ್ಕೂ, ಜನಸಾಮಾನ್ಯರ ಜೀವನಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಎಂದರೆ ಕೇರಳದ ಪ್ರತಿಯೊಬ್ಬನ ರಕ್ತದಲ್ಲೂ ಒಂದೊಂದು ರಾಜಕೀಯ ನೆತ್ತರು ಹರಿದಾಡುತ್ತಿದೆ ಎಂಬೊಂದು ಮಾತು ಹೊಸತಲ್ಲ. ಭಾರತದ ಇತರೆಡೆಗಳಿಗಿಂÀತ ಭಿನ್ನವಾಗಿ ಕೇರಳದ ಮಂದಿ ರಾಜಕೀಯವನ್ನು ತನ್ನೊಡಲೊಳಗೆ ಇರಿಸಿಕೊಂಡವರು. ಕಾರಣಗಳೇನೇ ಇರಲಿ.............

       ಇಂದು ರಾಜ್ಯ ವಿಧಾನ ಸಭೆಯ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಿದಾಗ ಜನಸಾಮಾನ್ಯರ ನಿಯಂತ್ರಣ ಅತ್ಯಗತ್ಯ. ಯಾಕೆಂದು ನಿಮಗೆಲ್ಲ ಗೊತ್ತು. ಕೋವಿಡ್ ಮಹಾಮಾರಿ ರಾಜ್ಯದ ಇಂಚಿಂಚನ್ನೂ ಆಪೋಷನಗೈಯ್ಯುವ ಹಠದಂತೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಹಿತ ಸರ್ಕಾರ ಈಗಾಗಲೇ ಕಠಿಣ ನಿಯಂತ್ರಣ ಘೋಷಿಸಿದೆ. ಅದು ಅತೀ ತುರ್ತು ಕೂಡ. ಏನಿದ್ದರೂ ಜನಸಾಮಾನ್ಯರಿಗೆ ಕೊರೊನಾದ ವಿರುದ್ದ ಗೆಲುವು ಈಗಗತ್ಯ. ಆದರೆ ಕೇಂದ್ರ, ರಾಜ್ಯ ಸರ್ಕಾರಗಳ ಲಕ್ಷ್ಯ ಮತ ಗಳಿಕೆ, ಅಧಿಕಾರ ಪಟ್ಟದ ತವಕ ಎದ್ದು ಕಾಣಿಸುತ್ತಿರುವುದರಿಂದ ಜನಸಾಮಾನ್ಯರ ರಕ್ಷಣೆ ಯಾರ ಹೊಣೆ ಎಂಬಬಗ್ಗೆ ಚಿಂತಿತರಾಗಲೇ ಬೇಕು.

         ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಜನಸಾಮಾನ್ಯರ ಸುರಕ್ಷತತೆ ಮುಖ್ಯವಾಗಿರಬೇಕು. ಇನ್ನುಳಿದಿರುವ ದಿನಗಳಲ್ಲಾದರೂ ಪ್ರಾಣ ವಾಯುವೂ, ಚಿಕಿತ್ಸೆಯೂ ಇಲ್ಲದೆ ಜನರು ಬೀದಿ-ಬೀದಿಗಳಲ್ಲಿ ಒದ್ದಾಡಬಾರದು. ಲಾಕ್ ಡೌನ್, ಕಂಟೋನ್ಮೆಂಟ್ ಮೊದಲಾದ ಬೇಲಿಗಳ ಕಾರಣ ಮನೆಯೊಳಗೆ ಬಂಧಿಯಾಗಬಾರದು.  

       ಸಾವು ಹುಟ್ಟಿನ ಜೀವಗಳಿಗೆ ಬೆನ್ನಿಗೇ ಅಂಟಿದ ಕರ್ಮವಾದರೂ, ಇಂತಹದೊಂದು ಕಂಡು-ಕೇಳರಿಯದ ರುಜಿನದಿಂದಾಗಬಾರದು. ಅದೂ ಬಂಧು-ಬಾಂಧವರ ಮುಖಮುಚ್ಚಿಸಿ ಯಾರು-ಯಾರೋ ಎಲ್ಲೋ ಅಂತ್ಯಸಂಸ್ಕಾರ ನೆರವೇರಿಸುವಂತೆ ಆಗಲೇ ಬಾರದು. ಭಾರತದ ಮೂಲ ಅಸ್ಮಿತೆಗೇ ಅದು ವಂಚನೆಯಾಗಿದೆ. 

         ಭಾರತದಲ್ಲಿ ಕೋವಿಡ್ ಕಾರಣ ಮೃತರಾಗುತ್ತಿರುವವರ ರಾಶಿ-ರಾಶಿ ಹೆಸರು, ಪೋಟೋಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವುದು ನೋವು ಮತ್ತು ಮುಜುಗರವನ್ನು ಉಂಟುಮಾಡುತ್ತಿದೆ. 

           ವೈಫಲ್ಯಗಳನ್ನು ಅಂಗೀಕರಿಸುವುದು ಸುದೃಢ ಆಡಳಿತದ ಗರಿಮೆ ಎಂದಿಗೂ ಆಗಲಾರದು. ಈವಾರವಾದರೂ ಪರಿಣಾಮಕಾರಿ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಕಾರ್ಯವಿಧಾನಗಳನ್ನು ಸಿದ್ಧಪಡಿಸುವತ್ತ ಗಮನ ಹರಿಸೋಣ. ರಾಜನಾದವನ ಗೆಲುವು ಯುದ್ಧದಲ್ಲಿ ಎಲ್ಲರನ್ನೂ ಕಡವಿ ಆ ಬಳಿಕದ ಅಟ್ಟಹಾಸವಲ್ಲ. ಎಲ್ಲರನ್ನೂ ಉಳಿಸಿ, ಜಾಣತನದ ನಡೆಯೆಂಬುದು ಭಾರತೀಯ ರಾಜ್ಯಶಾಸ್ತ್ರದ ಒಂದೆಡೆ ಹೇಳಿರುವುದನ್ನು ಮರೆಯುವಂತಿಲ್ಲ. ಪ್ರಪಂಚದ ಮುಂದೆ ಭಾರತ ನಗೆಪಾಟಾಲಾಗುವ ಚಪ್ಪಾಳೆಯ ಧ್ವನಿಗಳು ಕೇಳಿಸುತ್ತಿರುವುದನ್ನೂ ಕೇಳಿಸದಿರಬಾರದು. ಚಿಂತಿಸಬೇಡಿ. ದೊಡ್ಡ ಪ್ರಮಾಣದ ಸ್ವರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರು, ರಾಜಕೀಯ-ಧಾರ್ಮಿಕ-ಸಮುದಾಯ-ಸಾ ಸಾಮಾಜಿಕ ಸಂಸ್ಥೆಗಳಿಂದ ಹಿಡಿದು ಎಲ್ಲವನ್ನು ಮಹಾಮಾರಿ ಅಮುಕುತ್ತಿದೆ. ಎಲ್ಲಿಯವರೆಗೆ ಕಾದು ನೋಡಬೇಕು. 

                ಔಷಧಿಗಳಿಗೂ ಅಂಟಿದ ವ್ಯಾಪಾರ!: 

     ಕೋವಿಡ್ ಲಸಿಕೆಗಳ ಬೆಲೆಯನ್ನು ನಿರ್ಣಯಿಸಬೇಕಾದುದು ಕಂಪೆನಿಗಳಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಭಾರತೀಯ ಜನಸಾಮಾನ್ಯರ ನಿಟ್ಟುಸಿರಿಗೆ ಕಾರಣವಾಗಿದೆ. ಅಬ್ಬಬ್ಬಾ ಕೋವಿಡ್ ಆರಂಭವಾದಾಗಿನಿಂದ ಭಾರತ ಒಂದಿಲ್ಲೊಂದು ಹೊಸ ಮಾರುಕಟ್ಟೆಗೆ ತೆರೆದುಕೊಂಡಿದ್ದು ಬಹುಷಃ ಜನನಾಯಕರ ಗಮನಕ್ಕೆ ಬಂದಂತಿಲ್ಲ. ನಿತ್ಯೋಪಯೋಗಿ ವಸ್ತುಗಳ ಬೆಲೆ ದಿನೇದಿನೇ ನಾಗಾಲೋಟದಲ್ಲಿದೆ. ಜೊತೆಗೀಗ ಕೋವಿಡ್ ಲಸಿಕೆಯವಿಷಯದಲ್ಲೂ ಔಷಧ ಕಂಪೆನಿಗಳು ಭಾರೀ ಮಾರುಕಟ್ಟೆ ಕುದುರಿಸಿದೆ. ಕೇರಳದ ಖಾಸಗೀ ಲ್ಯಾಬ್ ಗಳ ಕೊಯ್ಲು ಯೋಜನೆ ಬಹುಷಃ ಮರಿ ಮೊಮ್ಮಕಕ್ಕಳನ್ನು ದೃಷ್ಟಿಯಲ್ಲಿರಿಸಿ ಇರಬೇಕು!

         ವ್ಯಾಕ್ಸಿನೇಷನ್ ಪೆÇ್ರೀಗ್ರಾಂ ಆಫ್ ಇಂಡಿಯಾ ಪ್ರಕಾರ ನಿಜವಾಗಿಯೂ ಸಾರ್ವತ್ರಿಕ, ಉಚಿತ ಲಸಿಕೆ  ಇರಬೇಕು. ಇತರ ರೋಗ ನಿರೋಧಕ ಶಕ್ತಿ ಲಸಿಕೆಗಳನ್ನು ದೇಶದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇತರ ರೋಗನಿರೋಧಕಗಳು ಎಲ್ಲರಿಗೂ ಉಚಿತ ಮತ್ತು ಸುಪ್ರೀಂ ಕೋರ್ಟ್ ಸಹ ಈ ವಿಷಯವನ್ನು ಪರಿಗಣಿಸಿದೆ. ಇದೀಗ ಕೋವಿಡ್ ನ ಲಸಿಕೆಯ ಬಗ್ಗೆಯೂ ಸುಪ್ರ್ರೀಂ ಇದನ್ನೇ ಪುನರುಚ್ಚಿಸಿದೆ. 

       ಲಸಿಕೆ ಲಭ್ಯತೆಯ ಕೊರತೆಗೆ  ಸರ್ಕಾರವು  ಖಾಸಗಿ ಕಂಪೆನಿಗಳಿಗೆ ಏಕಸ್ವಾಮ್ಯ ಅನುಮತಿಸಿದ್ದರಿಂದ ಭಾರೀ ವ್ಯಪಾರಕ್ಕಿಳಿದಿವೆ. ಸಾರ್ವತ್ರಿಕ ಮತ್ತು ಉಚಿತ ಲಸಿಕೆಗಳ ನೀಡುವುದು ಸರ್ಕಾರದ ಔದಾರ್ಯವಲ್ಲ. ಅದು ಹಕ್ಕು. 



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries