ಪೆರ್ಲ: ಕೋರೊನ ನಿಗ್ರಹಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ಪೆರ್ಲ ಅಂಗನವಾಡಿ ಕೇಂದ್ರದ ಬಳಿ ಸಹಾಯಕ ಕೇಂದ್ರ (ಹೆಲ್ಪ್ ಡೆಸ್ಕ್) ಕಾರ್ಯಚರಣೆ ಆರಂಭಿಸಲಾಗಿದೆ.
ಶುಕ್ರವಾರದಿಂದ 24 ಗಂಟೆಯು ಇದು ಕಾರ್ಯಚರಿಸಲಿದ್ದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ನೇತೃತ್ವದಲ್ಲಿ ಈ ಸಹಾಯಕ ಕೇಂದ್ರದಲ್ಲಿ ಆರೋಗ್ಯಧಿಕಾರಿಗಳ ಹಾಗೂ ಸ್ವಯಂ ಸೇವಕರ ಸಹಾಯ ಲಭ್ಯವಿದೆ. ಅಗತ್ಯ ಇರುವವರು ಹೆಲ್ತ್ ಇನ್ಸ್ ಪೆಕ್ಟರ್ ಸಜೀತ್ 8547969974 ಈ ನಂಬ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರು ನೇತೃತ್ವದಲ್ಲಿ ವಿವಿಧ ಇಲಾಖೆಗಳ,ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಜತೆ ಚರ್ಚಿಸಿ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಒರ್ವ ನಿವಾಸಿಯು ಕೋರೋನ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಸಂಪರ್ಕದಿಂದ ದಿನಂಪ್ರತಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿಯೂ ಪಂಚಾಯತ್ ಇಲಾಖೆಯ ನಿಬಂಧನೆ ಹಾಗೂ ಆರೋಗ್ಯ ಕೇಂದ್ರದ ಪರಿಚರಣೆಯೊಂದಿಗೆ ಸಹಕರಿಸಲು ಕೋರಲಾಗಿದೆ.
ಪಂಚಾಯತ್ ಕೇಂದ್ರೀಕರಿಸಿ ಕೋರೋನ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಹಾಗೂ ವಾರ್ಡ್ ಮಟ್ಟದ ಕೋರೋನ ಜಾಗೃತ ಸಮಿತಿ ಸಭೆ ಸೇರಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ,ಪಂಚಾಯತ್ ಮಟ್ಟದಲ್ಲಿ ಮೈಕ್ ಪ್ರಚಾರ ನಡೆಸಿ, ಜಾಗೃತಿ ಕರಪತ್ರ ವಿತರಣೆ,ಆರೋಗ್ಯ ಕಾರ್ಯಕರ್ತೆಯರ ಮೂಲಕ ಕೋವಿಡ್ ನಿಗ್ರಹ ಹಾಗೂ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.