ತಿರುವನಂತಪುರ: ರಾಜ್ಯದಲ್ಲಿ ಪುನರಾಯ್ಕೆಯಾಗಿರುವ ಎಲ.ಡಿ.ಎಫ್ ನೇತೃತ್ವದ ಸರ್ಕಾರದ ಪ್ರಮಾಣ ವಚನ ಸಮಾರಂಭ ಮೇ 20 ರಂದು ನಡೆಯಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ರಾಜ್ ಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸರ್ಕಾರ ರಚಿಸುವಂತೆ ಅಧಿಕೃತವಾಗಿ ಪತ್ರವನ್ನು ಸಲ್ಲಿಸಿದ್ದಾರೆ.
ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಿದರು. ಸಿಪಿಎಂ, ಸಿಪಿಐ, ಕೇರಳ ಕಾಂಗ್ರೆಸ್ ಎಂ, ಕೇರಳ ಕಾಂಗ್ರೆಸ್ ಬಿ, ಕಾಂಗ್ರೆಸ್ ಎಸ್, ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್, ಐಎನ್ ಎಲ್, ಎನ್‍ಸಿಪಿ, ಜನತಾದಳ ಎಸ್, ಎಲ್‍ಜೆಡಿ ಮತ್ತು ಎಡ ಸ್ವತಂತ್ರರು ಸರ್ಕಾರ ರಚನೆಯಲ್ಲಿ ಪಿನರಾಯಿ ವಿಜಯನ್ ಅವರನ್ನು ಬೆಂಬಲಿಸಿ ಪತ್ರಗಳನ್ನು ಹಸ್ತಾಂತರಿಸಿದರು.
ನಾಳೆ ನಡೆಯಲಿರುವ ಎಲ್‍ಡಿಎಫ್ ಸಭೆ ಅಧಿಕೃತವಾಗಿ ಪಿಣರಾಯಿ ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತದೆ. ಇಲಾಖಾ ವಿಭಾಗದ ಮಾತುಕತೆ ನಂತರ ಪೂರ್ಣಗೊಳ್ಳಲಿದೆ. ಸಿಪಿಎಂ ಮತ್ತು ಸಿಪಿಐ ತಮ್ಮ ಮಂತ್ರಿಗಳು ಯಾರೆಂದು ಆ ಬಳಿಕ ನಿರ್ಧರಿಸುತ್ತಾರೆ ಮತ್ತು ಪ್ರಕಟಣೆ ನೀಡುತ್ತಾರೆ.
ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮೇ 20 ರಂದು ತಿರುವನಂತಪುರ ಕೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಕ್ರೀಡಾಂಗಣದಲ್ಲಿ ಟೆಂಟ್ ಸೇರಿದಂತೆ ಸೌಲಭ್ಯಗಳನ್ನು ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ. ಕೋವಿಡ್ ತೀವ್ರತೆಯ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಪೆÇ್ರೀಟೋಕಾಲ್ಗೆ ಅನುಗುಣವಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಗಳನ್ನು ನಡೆಸಲಾಗುವುದು. ಅನುಮತಿ ನೀಡಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.
ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಘ(ಐಎಂಎ)ಯು ಇಂದು ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿಯಲ್ಲಿ ಆನ್ ಲೈನ್ ಮೂಲಕ ಸಮಾರಂಭ ನಡೆಸಬೇಕೆಮದು ವಿನಂತಿಸಿದ್ದು, ನಾಳೆಯ ಸಭೆಯಲ್ಲಿ ಪಕ್ಷಗಳು ಅಂತಿಮ ನಿರ್ಣಯ ಕೈಗೊಳ್ಳಲಿದೆ ಎನ್ನಲಾಗಿದೆ.